Kannada NewsKarnataka NewsNationalPolitics

*ಪೊಕ್ಸೊ ಪ್ರಕರಣದಲ್ಲಿ ಯಡಿಯೂರಪ್ಪ ಅವರಿಗೆ ಜಾಮೀನು ಸಿಕ್ಕಿದ್ದು ನ್ಯಾಯ ಸಮ್ಮತವಾಗಿದೆ: ಬಸವರಾಜ ಬೊಮ್ಮಾಯಿ*

ಪ್ರಗತಿವಾಹಿನಿ ಸುದ್ದಿ: ಪೋಕ್ಸೊ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಕೋರ್ಟ್ ಜಾಮೀನು ನೀಡಿರುವುದು ನ್ಯಾಯಸಮ್ಮತವಾಗಿದೆ ಎಂದು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪನವರು ಆ ತರಹದ ವಿಚಾರದಲ್ಲಿ ಭಾಗಿಯಾಗಿಲ್ಲ. ಅವರ ವಿರುದ್ದ ಷಡ್ಯಂತ್ರ ಮಾಡಿದ್ದು ಅಧಿಕಾರಿಗಳು ಕರೆದಾಗ ಹೋಗಿ ಕೇಳಿದ ಪ್ರಶ್ನೆಗಳಿಗೆ ಉತ್ತರ ಕೊಟ್ಟಿದ್ದಾರೆ. ಯಡಿಯೂರಪ್ಪನವರಿಗೆ ಸನ್ನಡತೆಯಿದೆ

ಕೋರ್ಟ್ ಇದನ್ನು ಒಪ್ಪಿಕೊಂಡು ಸದ್ಯ ರಿಲೀಪ್ ಕೊಟ್ಟಿದ್ದು ನ್ಯಾಯಸಮ್ಮತವಾಗಿದೆ ನಾವು ಸ್ವಾಗತ ಮಾಡುತ್ತೇವೆ

ಮುಂದೆಯು ಕಾನೂನು ಹೋರಾಟದಲ್ಲಿ ಯಡಿಯೂರಪ್ಪ ನವರು ವಿಜಯಶಾಲಿಯಾಗುವ ವಿಶ್ವಾಸವಿದೆ ಎಂದು ಹೇಳಿದರು.

ಇದಕ್ಕೂ ಮೊದಲು ಮಾತನಾಡಿದ ಅವರು, ಯಡಿಯೂರಪ್ಪ ಅವರ ವಿರುದ್ದದ ಪ್ರಕರಣ ನೋಡಿದರೆ ಇದೊಂದು ರಾಜಕೀಯ ಪಿತೂರಿ, ಖಂಡಿತವಾಗಿಯೂ ಷಂಡ್ಯಂತ್ರ. ಅದು ಸಂಪೂರ್ಣ ಕೇಸ್ ಪಾಲೋ ಮಾಡಿದರೆ, ಅದರ ಹಿನ್ನಲೆ ನೋಡಿದರೆ ಷಂಡ್ಯಂತ್ರ ಇದೆ. ಮೂರು ತಿಂಗಳ ಬಿಟ್ಟು, ಈಗ ಒಂದೇ ದಿನಕ್ಕೆ ಸಮಯ ಕೊಟ್ಟು, ವಾರೆಂಟ್ ನೀಡುವುದು ಬಹಳಷ್ಟು ಲ್ಯಾಪ್ಸ ಇದೆ. ಅವರ ವಿರುದ್ದ ಈ ಹಿಂದೆ ಹಲವಾರು ಕೇಸಗಳನ್ನು ಹಾಕಿದ್ದರು. ಆ ಎಲ್ಲಾ ಕೇಸ್ ಗಳಲ್ಲಿ ಸುಪ್ರೀಂ ಕೋರ್ಟ್ ಗೆ ಹೋಗಿ ಗೆದ್ದುಕೊಂಡು ಬಂದಿದ್ದಾರೆ. ಅವೇಲ್ಲಾ ಸುಳ್ಳು ಕೇಸ ಗಳು ಅನ್ನುವುದು ಗೊತ್ತಾಗಿದೆ. ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಸುವವರೆಗೂ ಕೇಸ್ ಮಾಡಿದ್ದರು‌. ಬಹುತೇಕ ರಾಷ್ಟ್ರದಲ್ಲಿ ರಾಜಕಾರಣದಲ್ಲಿ ರಾಜಕಾರಣಿಗೆ ಕೇಸ್ ಹಾಕಿ ಕಟ್ಟಿ ಹಾಕುವ  ಪ್ರಯತ್ನ ಮಾಡಿದ್ದಾರೆ. ನಮಗೆ ವಿಶ್ವಾಸ ಇದೆ. ಈ ಪ್ರಕರಣದಲ್ಲಿ ಸಹ ಯಡಿಯೂರಪ್ಪವರಿಗೆ ನ್ಯಾಯ ಸಿಗುತ್ತದೆ ಎಂದು ಹೇಳಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button