ಯಡೂರಿನ ಇತಿಹಾಸ ಪ್ರಸಿದ್ಧ ಶ್ರೀ ವೀರಭದ್ರೆಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ಸಚಿವೆ ಶಶಿಕಲಾ ಜೊಲ್ಲೆ
ಪ್ರಗತಿವಾಹಿನಿ ಸುದ್ದಿ; ಚಿಕ್ಕೋಡಿ: ಉತ್ತರ ಕರ್ನಾಟಕ ಭಕ್ತರ ಅನುಕೂಲಕ್ಕಾಗಿ ಶೀಘ್ರವೇ ಸುಕ್ಷೇತ್ರ ಶ್ರೀಶೈಲದಲ್ಲಿ ಕರ್ನಾಟಕ ಯಾತ್ರಿ ನಿವಾಸವನ್ನು ನಿರ್ಮಾಣ ಮಾಡಲಾಗುವುದು ಎಂದು ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದರು.
ಚಿಕ್ಕೋಡಿ ತಾಲೂಕಿನ ಸುಕ್ಷೇತ್ರ ಯಡೂರಿನ ಶ್ರೀವೀರಭದ್ರೇಶ್ವರ, ಭದ್ರಕಾಳೇಶ್ವರಿ ದೇವಿಯ ಹಾಗೂ ಶ್ರಿಶೈಲ್ ಸೂರ್ಯಸಿಂಹಾಸನ ಮಠದ ಶ್ರೀ ಶ್ರೀ ಶ್ರೀ 1008 ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಜಿಗಳ ದರ್ಶನವನ್ನು ಪಡೆದುಕೊಂಡರು.
ನಂತರ ಮಾತನಾಡಿ ಸಚಿವೆ ಶಶಿಕಲಾ ಜೊಲ್ಲೆಯವರು ಶ್ರಿಶೈಲ ಮಲ್ಲಿಕಾರ್ಜುನ ಇದು 12 ಜ್ಯೋರ್ತಿಲಿಂಗಗಳಲ್ಲಿ ಪವಿತ್ರವಾದ ಸ್ಥಳ. ಈ ಒಂದು ದೇವಸ್ಥಾನಕ್ಕೆ ನಮ್ಮ ಉತ್ತರ ಕರ್ನಾಟಕದ ಭಾಗದ ಬಹಳಷ್ಟು ಭಕ್ತರು ಕಂಬಿಗಳನ್ನು ತೆಗೆದುಕೊಂಡು ಶ್ರೀಶೈಲ ಮಲ್ಲಿಕಾರ್ಜುನರ ದರ್ಶನವನ್ನು ಪಡೆದುಕೊಳ್ಳಲು ಹೋಗುತ್ತಾರೆ. ಈ ಹಿನ್ನಲೆಯಲ್ಲಿ ಭಕ್ತರಿಗೆ ಅಲ್ಲಿ ಉಳಿದುಕೊಳ್ಳಲು ಹಾಗೂ ಕಂಬಿಗಳನ್ನು ಇಡಲು, ಶ್ರಿಶೈಲನಲ್ಲಿ ಕರ್ನಾಟಕದ ಯಾತ್ರಿ ನಿವಾಸವನ್ನು ನಿರ್ಮಿಸುವ ಬಗ್ಗೆ ಶ್ರೀಶೈಲ ಜಗದ್ಗುರುಗಳ ಜತೆ ಚರ್ಚೆಯನ್ನು ನಡೆಸಿದ್ದೆನೆ. ಶ್ರಿಶೈಲದಲ್ಲಿ ಕರ್ನಾಟಕದ ಯಾತ್ರಿ ನಿವಾಸ ಆಗಬೇಕು ಎಂಬುದು ಮುಖ್ಯಮಂತ್ರಿಗಳ ಆಶಯವಾಗಿದೆ. ಮುಂಬರುವ ದಿನಗಳಲ್ಲಿ ಶ್ರಿಶೈಲದಲ್ಲಿ ಕರ್ನಾಟಕದ ಯಾತ್ರಿ ನಿವಾಸ ನಿರ್ಮಾಣ ಮಾಡಲಾಗುವುದು ಎಂದು ಭರವಸೆ ನೀಡಿದರು.
ಈ ಸಂಧರ್ಭದಲ್ಲಿ ಅಜಯ ಸೂರ್ಯವಂಶಿ, ಅಮರ ಬೋರಗಾಂವೆ, ಮನೋಜ ಕಿಚಡೆ, ಸಚಿನ ಪಾಟೀಲ, ಅಪ್ಪು ವನಿರೆ, ಈರಣ್ಣಾ ಅಮ್ಮಣಗಿ, ಧೊಂಡಿರಾಮ ಬೆಡಗೆ, ದೀಪಕ ಇನಾಮದಾರ, ನರಸಗೌಡ ಪಾಟೀಲ, ಮಂಜುನಾಥ ದೊಡ್ಡಮನಿ, ನರಸಗೌಡ ಪಾಟೀಲ ಶ್ರೀಶೈಲ ಪುಠಾಣೆ ಸೇರಿದಂತೆ ಶಿವತೇಜ ಫೌಂಡೇಶನ ಸದಸ್ಯರು ಉಪಸ್ಥಿತರಿದ್ದರು.
ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ