Belagavi NewsBelgaum NewsKannada NewsKarnataka NewsLatest

*ಯಕ್ಸಂಬಾ ಶ್ರೀ ಜ್ಯೋತಿ ಸಹಕಾರಿ ಸಂಘ: ಸದಸ್ಯರಿಗೆ ಲಾಭಾಂಶ, ಸಿಬ್ಬಂದಿಗಳಿಗೆ ಬೋನಸ್ ಘೋಷಣೆ*

ಪ್ರಗತಿವಾಹಿನಿ ಸುದ್ದಿ: ಯಕ್ಸಂಬಾ ಶ್ರೀ ಜ್ಯೋತಿ ವಿವಿಧ ಉದ್ದೇಶಗಳ ಸೌಹಾರ್ದ ಸಹಕಾರಿ ಸಂಘವು ಪ್ರಸಕ್ತ 2023-24ನೇ ಸಾಲಿನ ದಸರಾ-ದೀಪಾವಳಿ ಹಬ್ಬದ ಪ್ರಯುಕ್ತ ತನ್ನ ಸದಸ್ಯರಿಗೆ ಶೇ. 10 ಲಾಭಾಂಶ ಮತ್ತು ಸಿಬ್ಬಂದಿಗಳಿಗೆ ಶೇ. 8.33 ಬೋನಸ್ ನೀಡುವುದಾಗಿ ಸಂಸ್ಥೆಯ ಸಂಸ್ಥಾಪಕ ಅಣ್ಣಾಸಾಹೇಬ ಜೊಲ್ಲೆ ಘೋಷಿಸಿದರು.


ಯಕ್ಸಂಬಾದ ಶ್ರೀ ಬಿರೇಶ್ವರ ಸಹಕಾರಿ ಸಂಸ್ಥೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಹಕಾರಿಯ ಆರ್ಥಿಕ ಚಟುವಟಿಕೆಗಳು ಯಶಸ್ವಿಯಾಗಿ ನಡೆದಿರುವುದರಿಂದಲೇ ಸದಸ್ಯರು ಹಾಗೂ ಸಿಬ್ಬಂದಿಗಳಿಗೆ ಈ ರೀತಿಯ ಆರ್ಥಿಕ ಪ್ರಯೋಜನವನ್ನು ನೀಡಲು ಸಾಧ್ಯವಾಗಿದೆ ಎಂದು ವಿವರಿಸಿದರು.


ಅವರು ನೀಡಿದ ವಿವರಗಳ ಪ್ರಕಾರ, ಸದಸ್ಯರಿಗೆ 2023-24ನೇ ಸಾಲಿನ ₹2.03.57.700 ರೂಪಾಯಿ ಶೇರು ಮೊತ್ತದ ಮೇಲೆ ಶೇ. 10ರಷ್ಟು ಲಾಭಾಂಶವನ್ನು ಅವರ ಖಾತೆಗಳಿಗೆ ಜಮೆ ಮಾಡಲಾಗಿದೆ. ನೌಕರರಿಗೆ ಒಟ್ಟಾರೆ ₹48.06 ಲಕ್ಷ ಮೊತ್ತದ ಬೋನಸ್ ಬಿಡುಗಡೆಯಾಗಿದ್ದು, ಪ್ರತಿ ನೌಕರರ ಖಾತೆಗೆ ಸರಾಸರಿ ₹965ರಷ್ಟು ಮೊತ್ತ ಜಮೆ ಆಗಿದೆ. ಒಟ್ಟು 423 ಮಂದಿ ನೌಕರರು ಇದರ ಪ್ರಯೋಜನ ಪಡೆದಿದ್ದಾರೆ.
ಸಂಸ್ಥೆಯ ಆರ್ಥಿಕ ಸ್ಥಿತಿಯನ್ನು ವಿವರಿಸುತ್ತಾ ಅವರು, ಸಹಕಾರಿಯು ಒಟ್ಟು 46,744 ಸದಸ್ಯರನ್ನು ಹೊಂದಿದ್ದು, ₹2.54 ಕೋಟಿ ಶೇರು ಬಂಡವಾಳ, ₹354.43 ಕೋಟಿ ಠೇವು, ₹12.5 ಕೋಟಿ ಕಾಯ್ದಿಟ್ಟ ನಿಧಿ, ₹180.76 ಕೋಟಿ ಸಾಲ ಹಾಗೂ ಮುಂಗಡ, ₹128.84 ಕೋಟಿ ಬ್ಯಾಂಕ್ ಠೇವು ಮತ್ತು ಹೂಡಿಕೆ, ₹371.13 ಕೋಟಿ ದುಡಿಯುವ ಬಂಡವಾಳ ಹೊಂದಿದೆ ಎಂದು ವಿವರಿಸಿದರು. ಅಲ್ಲದೆ, ಪ್ರಸಕ್ತ ವರ್ಷದಲ್ಲಿ ₹7.50 ಕೋಟಿ ಖರೀದಿ ಹಾಗೂ ₹8.48 ಕೋಟಿ ಮಾರಾಟ ನಡೆಸಿದ್ದು, ಒಟ್ಟಾರೆ ₹1.72 ಕೋಟಿ ನಿವ್ವಳ ಲಾಭ ಗಳಿಸಿದೆ ಎಂದರು.

Home add -Advt


ಪ್ರಸ್ತುತ 81 ಶಾಖೆಗಳ ಮೂಲಕ ಸಂಸ್ಥೆ ತನ್ನ ಚಟುವಟಿಕೆಗಳನ್ನು ನಡೆಸುತ್ತಿದ್ದು, ಗ್ರಾಮೀಣ ಹಾಗೂ ಶಹರಿ ಪ್ರದೇಶದ ಸಾವಿರಾರು ಜನರಿಗೆ ಆರ್ಥಿಕ ಸೇವೆಗಳನ್ನು ನೀಡುತ್ತಿದೆ. ಸಹಕಾರಿಯ ವಿಸ್ತಾರವಾದ ಚಟುವಟಿಕೆಗಳಿಂದ ಸದಸ್ಯರ ಬದುಕಿನಲ್ಲಿ ಬದಲಾವಣೆ ತರಲು ಸಾಧ್ಯವಾಗುತ್ತಿದೆ ಎಂದು ಹೇಳಿದರು.


ಈ ಸಂದರ್ಭ ಸಹಕಾರಿಯ ಅಧ್ಯಕ್ಷ ಬಾಬುರಾವ ಮಾಳಿ, ಉಪಾಧ್ಯಕ್ಷ ವಿಶ್ವನಾಥ ಪೇಟಕರ, ನಿರ್ದೇಶಕರಾದ ಜಗದೀಶ ಹಿಂಗ್ಲಜ, ಜಗದೀಶ ಜಾಧವ, ರಾವಸಾಹೇಬ ಬಾಕಳೆ, ರಮೇಶ ಚೌಗಲೆ, ಸವಿತಾ ಉಂದೂರೆ, ಕೃಷ್ಣಪ್ಪ ಪೂಜಾರಿ, ಆನಂದ ಗಿಡ್ಡ, ಲಕ್ಷ್ಮಣ ಪ್ರಭಾತ, ಅಮೃತ ಖೋತ, ಪ್ರಧಾನ ವ್ಯವಸ್ಥಾಪಕ ಸಂತೋಷ ಪಾಟೀಲ, ಸಹಾಯಕ ಪ್ರಧಾನ ವ್ಯವಸ್ಥಾಪಕ ಮಹಾಂತೇಶ ಶಿರೋಳ, ಸಂತೋಷ ಪೂಜಾರಿ, ತಾನಾಜಿ ಶಿಂಧೆ ಮುಂತಾದವರು ಹಾಜರಿದ್ದರು.

Related Articles

Back to top button