Karnataka News

*ಸಮಾಧಿಯಿಂದ ಎದ್ದು ಬಂದ ಮಹಿಳೆ!* *ಆಘಾತಕಾರಿ ಘಟನೆ*

ಯೋಗಾ ಶಿಕ್ಷಕಿಯನ್ನು ಕಿಡ್ನ್ಯಾಪ್ ಮಾಡಿ ಅತ್ಯಾಚಾರಕ್ಕೆ ಯತ್ನ: ವಿರೋಧಿಸಿದ್ದಕ್ಕೆ ಗುಂಡಿ ತೋಡಿ ಹೂತು ಹಾಕಿದ್ದ ಕಿರಾತಕರು;

ಪ್ರಗತಿವಾಹಿನಿ ಸುದ್ದಿ: ಯೋಗಾ ಶಿಕ್ಷಕಿಯೊಬ್ಬರನ್ನು ಬೆಂಗಳೂರಿನಿಂದ ಕಿಡ್ನ್ಯಾಪ್ ಮಾಡಿದ್ದ ಕಿರಾತಕರು, ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದು, ವಿರೋಧಿಸಿದಾಗ ಕತ್ತು ಹಿಸುಕಿ ಹತ್ಯೆಗೆ ಯತ್ನಿಸಿ, ಗುಂಡಿ ತೋಡಿ ಹೂತು ಹಾಕಿದ್ದರು. ಆದರೂ ಮಹಿಳೆ ಸಮಾಧಿಯಿಂದ ಎದ್ದು ಬಂದು ಪೊಲೀಸರಿಗೆ ದೂರು ನೀಡಿರುವ ಘಟನೆ ಬೆಳಕಿಗೆ ಬಂದಿದೆ.

Home add -Advt

ಬೆಂಗಳೂರಿನ ಕೆ.ಆರ್.ಪುರಂ ನಲ್ಲಿ ವಾಸವಾಗಿದ್ದ ಯೋಗಾ ಶಿಕ್ಷಕಿಯನ್ನು ಐವರು ಅ.23ರಂದು ಕಿಡ್ನ್ಯಾಪ್ ಮಾಡಿ, ಚಿಕ್ಕಬಳ್ಳಾಪುರದ ಹೊರವಲಯದ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾರೆ. ಬಳಿಕ ಆಕೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಲೈಂಗಿಕ ಕಿರುಕುಳ ನೀಡಿದ್ದು, ಮಹಿಳೆ ವಿರೋಧಿಸಿದ್ದಕ್ಕೆ ಆಕೆಯ ಕತ್ತು ಹಿಸುಕಿ ಹಿಂಸೆ ನೀಡಿದ್ದಾರೆ. ನಂತರದಲ್ಲಿ ಗುಂಡಿ ತೋಡಿ ಆಕೆಯನ್ನು ಹೂತು ಹಾಕಿ, ಅದರ ಮೇಲೆ ಮರದ ಕೊಂಬೆಯನ್ನಿಟ್ಟು ಆರೋಪಿಗಳು ಎಸ್ಕೇಪ್ ಆಗಿದ್ದರು.

ಹೂತು ಹಾಕಿದ್ದರೂ ಸಮಾಧಿಯಿಂದ ಜೀವಂತವಾಗಿ ಎದ್ದುಬಂದಿರುವ ಮಹಿಳೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕಿಡ್ನ್ಯಾಪ್ ಆಗಿದ್ದ ಶಿಕ್ಷಕಿ ಮಹಿಳೆ ದೂರು ಆಧರಿಸಿ ಆರೋಪಿಗಳ ಪತ್ತೆಗಾಗಿ ಚಿಕ್ಕಬಳ್ಳಾಪುರ ಎಸ್ ಪಿ ಕುಶಲ್ ಚೌಕ್ಸೆ ಪೊಲೀಸರ ವಿಶೇಷ ತಂಡ ರಚಿಸಿದ್ದರು. ಪ್ರಕರಣ ಸಂಬಂಧ ಸದ್ಯ ಓರ್ವ ಮಹಿಳೆ ಸೇರಿ ಐವರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

Related Articles

Back to top button