Karnataka News

*ಹೋರಿ ರಕ್ಷಿಸಲು ಹೋಗಿ ಕೆರೆಯಲ್ಲಿ ಮುಳುಗಿ ಇಬ್ಬರು ಸಾವು*

ಪ್ರಗತಿವಾಹಿನಿ ಸುದ್ದಿ: ಕೆರೆಗೆ ಬಿದ್ದ ಹೋರಿ ರಕ್ಷಿಸಲು ಹೋಗಿ ಇಬ್ಬರು ನೀರುಪಾಲಾಗಿರುವ ಘಟನೆ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಮಕರವಳ್ಳಿ ಗ್ರಾಮದಲ್ಲಿ ನಡೆದಿದೆ.

45 ವರ್ಷದ ನಾಗರಾಜ್ ಹಾಗೂ 48 ವರ್ಷದ ಮಾಲತೇಶ್ ದಾಸನೂರು ಮೃತ ದುರ್ದೈವಿಗಳು. ಗ್ರಾಮದ ಸಮೀಪವೇ ಇದ್ದ ಕೆರೆಯಲ್ಲಿ ಹೋರಿ ಬಿದ್ದಿತ್ತು. ಅದನ್ನು ರಕ್ಷಿಸಬೇಕೆಂದು ಕೆರೆಗೆ ಇಳಿದು ಇಬ್ಬರೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

Home add -Advt

ಕೆರೆಯಲ್ಲಿದ್ದ ಬಳ್ಳಿಗಳು ಕಾಲಿಗೆ ಸುತ್ತಿಕೊಂಡಿದ್ದರಿಂದ ಮೇಲೆ ಬರಲಾಗದೇ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ ಮೃತದೇಹಕ್ಕಾಗಿ ಕೆರೆಯಲ್ಲಿ ಶೋಧ ಕಾರ್ಯ ನಡೆದಿದೆ.

Related Articles

Back to top button