Belagavi NewsBelgaum NewsEducationKannada NewsKarnataka NewsNationalPolitics

*ಪಾಲಕರಿಗೆ ನೀವೇ ಸರ್ವಸ್ವ, ಅವರ ಕನಸು ನನಸು ಮಾಡಿ: ಚನ್ನರಾಜ ಹಟ್ಟಿಹೊಳಿ*

ಪ್ರಗತಿವಾಹಿನಿ ಸುದ್ದಿ:  ಪಾಲಕರಿಗೆ ಮಕ್ಕಳೇ ಸರ್ವಸ್ವ, ಮಕ್ಕಳಿಗಾಗಿ ಎಲ್ಲವನ್ನೂ ತ್ಯಾಗ ಮಾಡುತ್ತಾರೆ. ಅಂತಹ ಪಾಲಕರ ಕನಸನ್ನು ನನಸು ಮಾಡುವ ಸಂಕಲ್ಪ ಮಾಡಿ ಎಂದು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಕರೆ ನೀಡಿದ್ದಾರೆ.

ಹಿರೇಬಾಗೇವಾಡಿಯ ಗ್ರೂಪ್ ವಿದ್ಯಾವರ್ಧಕ ಸಂಘ (ರಿ) ಕರ್ನಾಟಕ ಸಂಯುಕ್ತ ಪದವಿಪೂರ್ವ ಕಾಲೇಜು, ಕರ್ನಾಟಕ ಬಾಲನಿಕೇತನ ಕನ್ನಡ ಪ್ರಾಥಮಿಕ ಶಾಲೆ, ಶ್ರೀ ಬಿ‌.ಕೆ.ಇಟಗಿ ರಾಷ್ಟ್ರೀಯ ಇಂಗ್ಲಿಷ್ ಮಿಡಿಯಂ ಸ್ಕೂಲ್ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ  ಭಾಗವಹಿಸಿ ಅವರು ಮಾತನಾಡುತ್ತಿದ್ದರು.

ವಿದ್ಯಾರ್ಥಿ ಜೀವನ ಮತ್ತೆ ಮತ್ತೆ ಬರುವುದಿಲ್ಲ, ಹಾಗಾಗಿ ಬಹಳ ಎಚ್ಚರಿಕೆಯಿಂದ ಓದಿನಲ್ಲಿ ತೊಡಗಿಕೊಳ್ಳಿ. ಜೀವನದಲ್ಲಿ ದೊಡ್ಡ ಗುರಿಯೊಂದಿಗೆ ಹೆಜ್ಜೆ ಇಡಿ. ಆದರ್ಶ ವ್ಯಕ್ತಿಗಳನ್ನು ಅನುಸರಿಸಿ. ನಿಮ್ಮ ಮೇಲೆ ಪಾಲಕರು ಬಹಳ ದೊಡ್ಡ ಕನಸು ಕಟ್ಟಿಕೊಂಡಿರುತ್ತಾರೆ. ತಮ್ಮ ಮಕ್ಕಳು ತಮ್ಮಂತೆ ಕಷ್ಟಪಡದೆ ದೊಡ್ಡ ವ್ಯಕ್ತಿಯಾಗಿ ಹೊರಹೊಮ್ಮಲಿ ಎಂದು ಪ್ರತಿಯೊಬ್ಬ ತಂದೆ- ತಾಯಿ ಬಯಸುತ್ತಾರೆ. ಹಾಗಾಗಿ ಉನ್ನತ ಸ್ಥಾನಕ್ಕೆ ಏರುವ ಸಂಕಲ್ಪ ಮಾಡಿ, ಪಾಲಕರನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಅವರು ಕರೆ ನೀಡಿದರು. 

ಕಾರ್ಯಕ್ರಮದಲ್ಲಿ ವಾಯ್ ಎಲ್.ಪಾಟೀಲ, ಎಸ್.ಇಟಗಿ, ಆಯ್.ಬಿ.ಅರಳಿಕಟ್ಟಿ, ಬಿ‌.ಜಿ.ವಾಲಿಇಟಗಿ, ಎಸ್.ಬಿ‌.ಇಟಗಿ, ಎಸ್‌.ಸಿ.ಓಂಕಾರಿ, ಶಿಕ್ಷಣಾಧಿಕಾರಿ ಆಂಜನೇಯ ಆರ್.ಕೆ, ಎಂ.ಕೆ.ಕರಿದಾವಲ್, ಬಿ.ಜಿ.ವಾಲಿಇಟಗಿ, ವಾಯ್.ಎಲ್.ಪಾಟೀಲ, ಉಳವಪ್ಪ ನಂದಿ, ರಘು ಪಾಟೀಲ, ರಾಮನಗೌಡ ಪಾಟೀಲ, ಎಮ್.ಆಯ್.ಪೂಜಾರ, ಬಿ.ಡಿ.ಗಣಾಚಾರಿ, ನಿರ್ಮಲಾ ಇಟಗಿ, ಅಡಿವೇಶ್ ಇಟಗಿ, ಗೌಸ್ ಜಾಲಿಕೊಪ್ಪ, ಸೈಯ್ಯದ್ ಸನದಿ, ಸಲೀಮ್ ಸತ್ತಿಗೇರಿ ಉಪಸ್ಥಿತರಿದ್ದರು.

Home add -Advt

Related Articles

Back to top button