ಪ್ರಗತಿವಾಹಿನಿ ಸುದ್ದಿ: ಬೆಳಗಾವಿಯಲ್ಲಿ ಯತ್ನಾಳ್, ರಮೇಶ ಜಾರಕಿಹೊಳಿ ನೇತೃತ್ವದಲ್ಲಿ ವಕ್ಫ್ ವಿರುದ್ಧ ಹೋರಾಟ ನಡೆಯುತ್ತಿದ್ದು, ಮತ್ತೊಂದು ಕಡೆ ವಿಜಯಂದ್ರ ಬೆಂಬಲಿಗರು ಗರಂ ಆಗಿದ್ದಾರೆ. ಸೋತವರು, ತಿರಸ್ಕಾರವಾದಂತಹ ಅಪ್ರಸ್ತುತ ನಾಯಕರ ಕುರಿತಾಗಿ ತಾನು ಮಾತನಾಡಲ್ಲ ಎಂಬ ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿಕೆ ವಿರುದ್ಧ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಸಿಡಿದೆದ್ದಿದ್ದಾರೆ.
ಯತ್ನಾಳ್ ಮತ್ತು ಟೀಂ ವಿರುದ್ಧ ಚರ್ಚಿಸಲು ಇಂದು ಮಾಜಿ ಸಿಎಂ ಬಿಎಸ್‌ವೈ ಅವರ ನಿವಾಸದಲ್ಲಿ ನಡೆದ ಸಭೆ ಬಳಿಕ ಪ್ರತಿಕ್ರಿಯೆ ನೀಡಿದ ಅವರು, ನೋಡಪ್ಪ, ನೀನು ಪ್ರತಾಪ್ ಸಿಂಹ ಅಲ್ಲ… ಪೇಪರ್ ತಿಮ್ಮ ಎಂದು ಗುಡುಗಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ನಿನಗೆ ಟಿಕೆಟ್ ಕೊಡಬಾರದೆಂದು ಪತ್ರ ಬರೆದಿದ್ಯಾರು ಅಂತಾ ನನಗೆ ಗೊತ್ತಿದೆ. ನಾನು ಸೋತಿರಬಹುದು. ಆದರೆ ಜನ ಇನ್ನೂ ನನ್ನೊಂದಿಗೆ ಪ್ರೀತಿ-ವಿಶ್ವಾಸದಿಂದ ಇದ್ದಾರೆ. ನಮ್ಮದೇ ಆದ ಸಾಮರ್ಥ್ಯ-ಸಂಘಟನೆ ಇದೆ. ಒಳ ಮೀಸಲಾತಿ, ಇನ್ನಿತರೆ ನಮ್ಮ-ನಮ್ಮ ತಪ್ಪುಗಳಿಂದ ಸೋತಿದ್ದೇವೆ. ಜನ ನಮ್ಮನ್ನು ತಿರಸ್ಕಾರ ಮಾಡಿಲ್ಲ. ನೀನು ಪೇಪರ್ ತಿಮ್ಮ ಅಷ್ಟೇ ಎಂದು ಶಾಸಕ ಯತ್ನಾಳ್ ಟೀಂ ನಲ್ಲಿ ಗುರುತಿಸಿಕೊಂಡಿರುವ ಪ್ರತಾಪ್ ಸಿಂಹ ವಿರುದ್ಧ ರೇಣುಕಾಚಾರ್ಯ ಕಿಡಿಕಾರಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ