ಪ್ರಗತಿವಾಹಿನಿ ಸುದ್ದಿ; ಪುಣೆ: ನಕಲಿ ಐಡಿ ಮೂಲಕ ಸೋಷಿಯಲ್ ಮೀಡಿಯಾಗಳಲ್ಲಿ ಆತಂಕಕಾರಿ ಮೆಸೇಜ್‌ಗಳನ್ನು ಹರಿಬಿಡುತ್ತಿದ್ದ ಇಬ್ಬರು ಯುವತಿಯರನ್ನು ಪುಣೆಯ ಪಿಂಪ್ರಿ- ಚಿಂಚ್ವಾಡ ಪೊಲೀಸರು ಬಂಧಿಸಿದ್ದಾರೆ.
ಪವಾರ್‌ನಗರದ ಸಾಕ್ಷಿ ಹೇಮಂತ್ ಶ್ರಿಶ್ರಿಮಲ್ (18) ಹಾಗೂ ಸಾಕ್ಷಿ ರಾಕೇಶ ಕಶ್ಯಪ (18) ಬಂಧಿತರು.
ಈ ಇಬ್ಬರು ಯುವತಿಯರು ಥೇರಗಾಂವ್ ಕ್ವೀನ್ ಹೆಸರಿನ ನಕಲಿ ಐಡಿ ಸೇರಿದಂತೆ 50ಕ್ಕೂ ಹೆಚ್ಚು ನಕಲಿ ಐಡಿಗಳನ್ನು ಸೃಷ್ಟಿಸಿಕೊಂಡಿದ್ದರು. ಆತಂಕ ಹುಟ್ಟಿಸುವ ಮಾತುಗಳನ್ನು ಆಡಿ, ಅದರ ವಿಡಿಯೋ ಮಾಡಿ ಫೇಸ್‌ಬುಕ್ ಮತ್ತಿತರ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಿದ್ದರು. ಕೊಲೆ ಬೆದರಿಕೆ, ಬಾಂಬ್ ಹಾಕಿ ಸ್ಪೋಟಿಸುವ ಬೆದರಿಕೆ ಮೊದಲಾಗಿ ಆತಂಕ ಹುಟ್ಟಿಸುವ ಪೋಸ್ಟ್ ಗಳನ್ನು ಮಾಡುತ್ತಿದ್ದರು.
ಮಹಿಳಾ ಪಿಎಸ್‌ಐ ಸಂಗೀತಾ ಗೋಡೆ ಎಂಬುವವರು ಈ ಆತಂಕಕಾರಿ ವಿಡಿಯೋ ಮೆಸೇಜ್‌ಗಳನ್ನು ಗಮನಿಸಿ ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರು ಇಬ್ಬರು ಯುವತಿಯರನ್ನು ಬಂಧಿಸಿದ್ದಾರೆ. ಯುವತಿಯರು ತಮ್ಮ ತಪ್ಪು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು ಸಾಕ್ಷಿ ಹೇಮಂತ್ ಶ್ರಿಶ್ರಿಮಲ್ ಎಂಬ ಯುವತಿಯ ಜೊತೆ ವಿಡಿಯೋದಲ್ಲಿ ಪದೆ ಪದೇ ಕಂಡುಬರುತ್ತಿದ್ದ ಇನ್ನೊಬ್ಬ ವ್ಯಕ್ತಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ. ಪೊಲೀಸ್ ಅಧಿಕಾರಿ ಸಂಬಾಜಿ ಜಾಧವ್ ಪ್ರಕರಣದ ತನಿಖೆ ನಡೆಸಿದ್ದಾರೆ.
ಪ್ರತಿಭಟನಾನಿರತರ ಮೇಲೆ ಪೊಲೀಸರಿಂದ ಲಾಠಿ ಚಾರ್ಜ್; ಲಾಠಿ ಏಟಿಗೆ ವಿದ್ಯಾರ್ಥಿನಿ ತಲೆಯಿಂದ ಸುರಿದ ರಕ್ತ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ