
ಬೆಂಗಳೂರು: ಸಾಕು ಗಿಳಿ ರಕ್ಷಿಸಲು ಹೋಗಿ ಯುವಕನೊಬ್ಬ ಹೈಟೆನ್ಶನ್ ವಿದ್ಯುತ್ ವೈರ್ ತಗುಲಿ ಸಾವನ್ನಪ್ಪಿರುವ ದಾರುಣ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಗಿರಿನಗರದ ಅಪಾರ್ಟ್ ಮೆಂಟ್ ವೊಂದರಲ್ಲಿ ಈ ದುರಂತ ಸಂಭವಿಸಿದೆ. ಅರುಣ್ (35) ಮೃತ ಯುವಕ. ದುಬಾರಿ ಹಣ ಕೊಟ್ಟು ತಂದಿದ್ದ ಸಾಕುಗಿಳಿ ಅಪಾರ್ಟ್ ಮೆಂಟ್ ಮುಂದಿನ ಹೈಟೆನ್ಶನ್ ವಿದ್ಯುತ್ ಕಂಬದ ಮೇಲೆ ಕುಳಿತಿತ್ತು. ಗಿಳಿ ವಿದ್ಯುತ್ ತಂತಿಯ ಮೇಲೆ ಕುಳಿತುಬಿಡಿತ್ತದೆ ಎಂದು ಅದನ್ನು ರಕ್ಷಿಸಲು ಹೋದ ಯುವಕ ಕರೆಂಟ್ ಶಾಕ್ ಹೊಡೆದು ಕೆಳಗೆ ಬಿದ್ದಿದ್ದಾನೆ.
ಅಪಾರ್ಟ್ ಮೆಂಟ್ ಗೋಡೆಯ ಮೇಲೆ ಹತ್ತಿ ಸ್ಟೀಲ್ ಪೈಪ್ ಗೆ ಕಡ್ಡಿ ಸಿಕ್ಕಿಸಿ ಅದರಿಂದ ಗಿಳಿಯನ್ನು ರಕ್ಷಿಸಲು ಯುವಕ ಯತ್ನಿಸಿದ್ದ. ಆದರೆ ಕಡ್ದಿ ವಿದ್ಯುತ್ ತಂತಿಗೆ ಟಚ್ ಆಗುತ್ತಿದ್ದಂತೆ ವಿದ್ಯುತ್ ಪ್ರವಹಿಸಿದ್ದು, ಯುವಕ ಕೆಳಗೆ ಬಿದ್ದಿದ್ದಾನೆ. ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯುತಾದರೂ ಪ್ರಯೋಜನವಾಗಿಲ್ಲ. ಅಷ್ಟರಲ್ಲಿ ಯುವಕ ಕೊನೆಯುಸಿರೆಳೆದಿದ್ದಾನೆ.
