
ಪ್ರಗತಿವಾಹಿನಿ ಸುದ್ದಿ, ಖಾನಾಪುರ: ಈಜಲು ನದಿಗೆ ಇಳಿದಿದ್ದ ಯುವಕನೋರ್ವ ನೀರಿನ ಸೆಳೆತಕ್ಕೆ ಸಿಕ್ಕಿದ್ದರಿಂದ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಪಟ್ಟಣದ ಮಲಪ್ರಭಾ ನದಿಯಲ್ಲಿ ಭಾನುವಾರ ಸಂಜೆ ವರದಿಯಾಗಿದೆ.
ಮೃತನನ್ನು ಬೆಳಗಾವಿ ತಾಲೂಕು ಮಣ್ಣೂರು ಗ್ರಾಮದ ಸಮರ್ಥ ಚೌಗುಲೆ (೨೨) ಎಂದು ಗುರುತಿಸಲಾಗಿದೆ. ಖಾನಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.