
ಪ್ರಗತಿವಾಹಿನಿ ಸುದ್ದಿ: ಮದುವೆ ನಿರಾಕರಿಸಿದ ಕಾರಣಕ್ಕಾಗಿ ಹುಟ್ಟು ಹಬ್ಬದ ದಿನವೆ ಯುವತಿಯನ್ನು ಕೊಲೆ ಮಾಡಿದ ಆರೋಪಿ ತಾನು ಆತ್ಮಹತ್ಯೆ ಮಾಡಿಸಿಕೊಂಡಿದ್ದಾನೆ.
ಕೊಕ್ಕರ್ಣೆ ಚೆಗರಿಬೆಟ್ಟು ನಿವಾಸಿ ಕಾರ್ತಿಕ್ ಪೂಜಾರಿ, ತನ್ನ ನೆರೆಮನೆಯ ಪ್ರೇಯಸಿ ರಕ್ಷಿತಾ ಪೂಜಾರಿ (24) ಎಂಬಾಕೆಯನ್ನು ಚೂರಿಯಿಂದ ಕುತ್ತಿಗೆ ಹಾಗೂ ಎದೆಯ ಭಾಗಕ್ಕೆ ಇರಿದು ಪರಾರಿಯಾಗಿದ್ದನು. ಇದರಿಂದ ಗಂಭೀರವಾಗಿ ಗಾಯಗೊಂಡ ಯುವತಿಯನ್ನು ಮಣಿಪಾಲ ಆಸ್ಪತ್ರೆ ದಾಖಲಿಸಲಾಗಿತ್ತು. ಗಂಭೀರ ಸ್ಥಿತಿಯಲ್ಲಿದ್ದ ರಕ್ಷಿತಾ ಸಾವನ್ನಪ್ಪಿದ್ದಳು.
ಇದೇ ವೇಳೆ ಯುವತಿಗೆ ಚಾಕುವಿನಿಂದ ಇರಿದು ಕೊಲೆಗೈದ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಕೊಲೆ ಆರೋಪಿ ಕಾರ್ತಿಕ್ ಪೂಜಾರಿ ಮೃತದೇಹ ಅಲ್ಲೇ ಸಮೀಪದ ಬಾವಿಯಲ್ಲಿ ಪತ್ತೆಯಾಗಿದೆ. ಈತ ಕೊಲೆ ಮಾಡಿದ ಬಳಿಕ ಪರಾರಿಯಾಗಿ ಅಲ್ಲೇ ಸಮೀಪದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.