Latest

ಪೂಜಾಸ್ನಾನಕ್ಕೆಂದು ನದಿಗಿಳಿದ ವ್ಯಕ್ತಿ; ಕುಟುಂಬದ ಕಣ್ಮುಂದೆಯೇ ನೀರಿನ ರಭಸಕ್ಕೆ ಕೊಚ್ಚಿ ಹೋದ ಯುವಕ

ಪ್ರಗತಿವಾಹಿನಿ ಸುದ್ದಿ; ಮಂಡ್ಯ: ರಾಜ್ಯಾದ್ಯಂತ ಭಾರಿ ಮಳೆಯಿಂದಾಗಿ ನದಿ, ಹಳ್ಳ-ಕೊಳ್ಳಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ನೀರಿಗಿಳಿಯದಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದ್ದರೂ ನಿರ್ಲಕ್ಷ ಮೆರೆಯುತ್ತಿರುವ ಜನರು ತಮ್ಮ ಪ್ರಾಣಕ್ಕೆ ಕುತ್ತು ತಂದುಕೊಳ್ಳುತ್ತಿದ್ದಾರೆ.

ಪೂಜೆಗೆಂದು ಶ್ರೀರಂಗಪಟ್ಟಣದ ಸಂಗಮಕ್ಕೆ ಆಗಮಿಸಿದ್ದ ಯುವಕನೊಬ್ಬ ಸ್ನಾನ ಮಾಡಲು ಕಾವೇರಿ ನದಿಗೆ ಇಳಿದಿದ್ದು, ಈ ವೇಳೆ ನೀರಿನ ರಭಸಕ್ಕೆ ಕೊಚ್ಚಿ ಹೋಗಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.

26 ವರ್ಷದ ಅಶೋಕ್ ನೀರಿನಲ್ಲಿ ಕೊಚ್ಚಿ ಹೋದ ಯುವಕ. ಬೆಂಗಳೂರಿನ ಯಲಹಂಕ ನಿವಾಸಿಯಾಗಿದ್ದ ಯುವಕ ಕುಟುಂಬ ಸದಸ್ಯರು ಹಾಗೂ ಸ್ನೇಹಿತರೊಂದಿಗೆ ಪೂಜೆಗಾಗಿ ಸಂಗಮ ಕ್ಷೇತ್ರಕ್ಕೆ ತೆರಳಿದ್ದ.

ಪೂಜೆಗಾಗಿ ಸ್ನಾನಕ್ಕೆಂದು ಕಾವೇರಿ ನದಿಗೆ ಇಳಿದಿದ್ದಾನೆ. ಈ ವೇಳೆ ಕಾಲುಜಾರಿ ಬಿದ್ದಿದ್ದು, ನದಿ ರಭಸಕ್ಕೆ ಕುಟುಂಬದವರ ಕಣ್ಮುಂದೆಯೇ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ. ಯುವಕನ ರಕ್ಷಣೆಗಾಗಿ ಸ್ನೇಹಿತರು ಪ್ರಯತ್ನಿಸಿದ್ದಾರೆ ಆದರೂ ನದಿ ರಭಸಕ್ಕೆ ಸಾಧ್ಯವಾಗಿಲ್ಲ.

Home add -Advt

ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿಗಳು, ಪೊಲೀಸರು ದೌಡಾಯಿಸಿದ್ದು, ಯುವಕನಿಗಾಗಿ ನದಿಯಲ್ಲಿ ಶೋಧಕಾರ್ಯ ಮುಂದುವರೆದಿದೆ.
ಹಾಸ್ಟೇಲ್ ವಿದ್ಯಾರ್ಥಿನಿಯರಿಗೆ ವಾರ್ಡನ್ ಪತಿಯಿಂದ ಕಿರುಕುಳ

Related Articles

Back to top button