ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಡೇಟಿಂಗ್ ಆ್ಯಪ್ ನಲ್ಲಿ ಪರಿಚಯವಾದ ಯುವಕನನ್ನು ನಂಬಿ ಮೋಸ ಹೋದ ಯುವತಿಯೊಬ್ಬಳು ಈಗ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.
ಯುವತಿಯನ್ನು ಎಲ್ಲ ರೀತಿಯಲ್ಲಿ ಬಳಸಿಕೊಂಡ ವ್ಯಕ್ತಿ ಬಣ್ಣ ಬಯಲಾಗುತ್ತಿದ್ದಂತೆ ಈಗ ಎಸ್ಕೇಪ್ ಆಗಿದ್ದಾನೆ..
‘ಬಂಬಲ್’ ಎಂಬ ಡೇಟಿಂಗ್ ಆ್ಯಪ್ನಲ್ಲಿ ಯುವತಿ, ಸಂಗಾತಿ ಹುಡುಕುತ್ತಿದ್ದಳು. ಈ ವೇಳೆ ಆರೋಪಿ ಅನಿರುದ್ಧ ಎಂಬಾತನ ಪ್ರೊಫೈಲ್ನಿಂದ ಮೆಸೇಜ್ ಕಳುಹಿಸಿದ್ದಾನೆ. ಯುವತಿ ಕೂಡ ಆತನಿಗೆ ಮಾರುಹೋಗಿದ್ದಾಳೆ. ಇಬ್ಬರ ನಡುವೆ ಚಾಟಿಂಗ್ ಶುರುವಾಗಿ ಆತನನ್ನೇ ಮದುವೆಯಾಗಲು ಯುವತಿ ನಿರ್ಧರಿಸಿದ್ದಳು.
ಯುವತಿಯನ್ನು ಭೇಟಿಯಾಗುವಂತೆ ಅನಿರುದ್ಧ ತಿಳಿಸಿದ ಮೇರೆಗೆ ಇಬ್ಬರೂ ಭೇಟಿಯಾದಾಗ ಯುವತಿ ಬೆಚ್ಚಿಬಿದ್ದಿದ್ದಾಳೆ.
ಅನಿರುದ್ಧ ಹೆಸರಿನ ವ್ಯಕ್ತಿ ಮುಸ್ಲಿಂ ಧರ್ಮಕ್ಕೆ ಸೇರಿದ್ದು ಆತನ ನಿಜ ಹೆಸರು ಮುದಸ್ಸಿರ್ ಎಂದು ತಿಳಿದುಬಂದಿದೆ. ಕೊನೆಗೆ ಯುವತಿಗೆ ಪುಸಲಾಯಿಸಿ ತಾನು ಆಕೆಯನ್ನೇ ಮದುವೆಯಾಗುವುದಾಗಿ ಹೇಳಿದಾಗ ಯುವತಿ ಕೂಡ ಒಪ್ಪಿದ್ದಳು. ಆತನೊಂದಿಗೆ ದೈಹಿಕ ಸಂಪರ್ಕವನ್ನೂ ಬೆಳೆಸಿದ್ದಳು.
ಇಷ್ಟಕ್ಕೇ ಬಿಡದ ಮುದಸ್ಸಿರ್ ತಾಯಿ ಅಸ್ವಸ್ಥಳಾಗಿದ್ದಾಳೆ ಎಂದು ಹೇಳಿ ಯುವತಿಯಿಂದ 1 ಲಕ್ಷ ರೂ. ಪಡೆದು ತಾಯಿಯನ್ನು ನೋಡಲು ದುಬೈಗೆ ಹೋಗುವುದಾಗಿ ಹೇಳಿ ನಂತರ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದ.
ಇದರಿಂದ ವಿಚಲಿತಳಾದ ಯುವತಿ ಮುದಸ್ಸಿರ್ ಸಹೋದರನನ್ನು ಭೇಟಿಯಾಗಿ ವಿಚಾರಿಸಿದಾಗ ಆತನ ತಾಯಿ ಕ್ಷೇಮವಾಗಿದ್ದು ಕಾಶ್ಮೀರದಲ್ಲಿ ವಾಸವಾಗಿರುವುದಾಗಿ ಹಾಗೂ ಮುದಸ್ಸಿರ್ ಬೆಂಗಳೂರಿನಲ್ಲೇ ಇರುವುದಾಗಿ ತಿಳಿದುಬಂತು.
ಕೊನೆಗೂ ಮುದಸ್ಸಿರ್ ನನ್ನು ಹುಡುಕಿದಾಗ ಮತ್ತೊಂದು ಆಘಾತಕ್ಕೆ ಒಳಗಾದ ಯುವತಿಗೆ ಆತ ಈಗಾಗಲೇ ಮದುವೆಯಾಗಿ ಬೆಂಗಳೂರಿನಲ್ಲೇ ಸಂಸಾರ ಹೂಡಿರುವುದು ಗೊತ್ತಾಗಿದೆ.
ಇದೀಗ ಯುವತಿ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
https://pragati.taskdun.com/biperjoy-cyclonekarnatakakeralagujarathalert/
https://pragati.taskdun.com/munipuradheesha-murugendra-mahaswamyjis-birthday-special-article/
https://pragati.taskdun.com/slight-rise-in-gold-and-silver-prices/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ