Kannada NewsKarnataka NewsNationalPolitics

*ಮೊಬೈಲ್ ಹೊತ್ತೊಯ್ದ ಮಂಗ: ಕಪಿಚೇಷ್ಟೆಗೆ ಹೈರಾಣಾದ ಯುವತಿ*

ಪ್ರಗತಿವಾಹಿನಿ ಸುದ್ದಿ: ಮಂಗವೊಂದು ಬುಧವಾರ ಮಧ್ಯಾಹ್ನ ಯುವತಿಯ ಮೊಬೈಲ್ ಹೊತ್ತೊಯ್ದು ಮರದ ಮೇಲೆ ಕುಳಿತು ಸುಮಾರು ಒಂದು ತಾಸು ಸತಾಯಿಸಿದೆ. ಈ ಕಪಿಚೇಷ್ಟೆಗೆ ಯುವತಿ ಹೈರಾಣಾಗಿದ್ದಾಳೆ.‌

ಶಿವಮೊಗ್ಗ ನಗರದ ಕುವೆಂಪು ರಸ್ತೆಯ ನಂಜಪ್ಪ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ.‌ ಆಸ್ಪತ್ರೆಯ ಕಿಟಕಿಯೊಳಗೆ ಕೈಹಾಕಿದ ಮಂಗ, ಆಸ್ಪತ್ರೆ ಸಿಬ್ಬಂದಿ ರೇಷ್ಮಾ ಎಂಬುವರ ಮೊಬೈಲ್‌ ಎತ್ತಿಕೊಂಡು ಮರವೇರಿತು. ಸುಮಾರು ಸಮಯ ಯುವತಿಗೆ ಸತಾಯಿಸಿದ ಬಳಿಕ ಮೊಬೈಲ್ ಬಿಟ್ಟು ಅಲ್ಲಿಂದ ಪರಾರಿಯಾಯಿತು. 

Related Articles

ಮಂಗ ಆಸ್ಪತ್ರೆಯ ಕಿಟಕಿಯೊಳಗೆ ಕೈಹಾಕಿ ಮೋಬೈಲ್ ಹೊತ್ತೊಯ್ದಾಗ ಮಂಗನಿಂದ ವಾಪಸ್ ಮೋಬೈಲ್ ಪಡೆಯಲು ಸಾಕಷ್ಟು ಸರ್ಕಸ್ ಮಾಡಲಾಯಿತು.‌

ಕೊನೆಗೆ ಆಸ್ಪತ್ರೆ ಸಿಬ್ಬಂದಿ ಕಟ್ಟಡದ ಮೇಲೇರಿ ಬಾಳೆಹಣ್ಣು ತೋರಿಸಿ ಮಂಗನ ಗಮನ ಬೇರೆ ಕಡೆ ಸೆಳೆದರು. ಅದು ಬಾಳೆಹಣ್ಣು ತೆಗೆದುಕೊಳ್ಳುತ್ತಿದ್ದಂತೆ ಪಟಾಕಿ ಸಿಡಿಸಿದರು. ಕೊನೆಗೆ ಬಾಳೆಹಣ್ಣು ಎತ್ತಿಕೊಂಡ ಕಪಿ, ಮೊಬೈಲ್ ಬಿಟ್ಟು ಪರಾರಿಯಾಯಿತು.

Home add -Advt

ಮಂಗ ಮೊಬೈಲ್ ಹೊತ್ತೊಯ್ದು ಅದರ ಜೊತೆ ನಾನಾ ರೀತಿಯ ಸರ್ಕಸ್ ಮಾಡಿದೆ. ಮೊಬೈಲ್ ಎದೆಗೆ ಅಪ್ಪಿಕೊಳ್ಳುವುದು, ಬೆರಳಾಡಿಸುವುದು ಇತ್ಯಾದಿ- ಈ ಎಲ್ಲಾ ಘಟನೆಯ ದೃಷ್ಯವನ್ನು ಸ್ಥಳೀಯರು ಮೋಬೈಲ್ ನಲ್ಲಿ ಸೇರೆಹಿಡಿದಿದ್ದಾರೆ.  

Related Articles

Back to top button