Latest

ಯುವ ಕಾಂಗ್ರೆಸ್ ಅಧ್ಯಕ್ಷ ಪಟ್ಟಕ್ಕೇರಿದ ಮೊಹಮ್ಮದ್ ನಲಪಾಡ್

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಮೊಹಮ್ಮದ್ ನಲಪಾಡ್ ಅಧಿಕಾರ ಸ್ವೀಕರಿಸಿದ್ದಾರೆ.

ಬೆಂಗಳೂರಿನ ಯುವ ಕಾಂಗ್ರೆಸ್ ಕಚೇರಿಯಲ್ಲಿ ಸರ್ವಧರ್ಮ ಪ್ರಾರ್ಥನೆ ಮೂಲಕ ಮೊಹಮ್ಮದ್ ನಲಪಾಡ್ ಅಧಿಕಾರ ಸ್ವೀಕರಿಸಿದರು. ಈ ವೇಳೆ ಮಾತನಾಡಿದ ಮೊಹಮ್ಮದ್ ನಲಪಾಡ್, ಹಿಂದಿನ ಘಟನೆಗಳ ಬಗ್ಗೆ ಈಗ ವಿಚಾರ ಬೇಡ, ಇಂದಿನಿಂದ ಯುವ ಕಾಂಗ್ರೆಸ್ ಅಧ್ಯಕ್ಷ ನಾನೇ, ಯಾವುದೇ ಗೊಂದಲಗಳು ಬೇಡ. ಹೈಕಮಾಂಡ್ ಏನೇ ಜವಾಬ್ದಾರಿ ಕೊಟ್ಟರೂ ನಿರ್ವಹಿಸಲು ಸಿದ್ಧ ಎಂದರು.

Home add -Advt

2018ರಲ್ಲಿ ಒಂದು ಘಟನೆ ನಡೆದಿತ್ತು. ಆಗ ಎಲ್ಲರಿಗೂ ಕ್ಷಮೆ ಕೇಳಿದ್ದೇನೆ. ಅದಾದ ಮೇಲೆ ಇಲ್ಲಿಯವರೆಗೂ ನನ್ನ ವಿರುಧ ಬಂದಿರುವುದು ಕೇವಲ ಆರೋಪ. ರಾಜಕೀಯವಾಗಿ ನನ್ನ ಮುಗಿಸಲು ಷಡ್ಯಂತ್ರ ಮಾಡಿದರು ಎಂದರು. ಇದೇ ವೇಳೆ ಯುವ ಕಾಂಗ್ರೆಸ್ ಹುದ್ದೆ ನೇಮಕಾತಿಯಲ್ಲಿ ಇಂಡಿಯನ್ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಭ್ರ‍ಷ್ಟಾಚಾರ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಾನಾಗಲಿ, ರಕ್ಷಾ ರಾಮಯ್ಯ ಅವರಾಗಲಿ ಯಾವುದೇ ಹಣ ನೀಡಿಲ್ಲ. ಈಗ ಹರಿದಾಡುತ್ತಿರುವ ಪತ್ರದ ಹಿಂದೆ ರಾಜಕೀಯವಿದೆ. ಇದು ಸುಳ್ಳು ಆರೋಪ ಎಂದು ಹೇಳಿದರು.
ಕುತೂಹಲ ಮೂಡಿಸಿದ ಸಚಿವ ಆನಂದ್ ಸಿಂಗ್-ಡಿಕೆ.ಶಿವಕುಮಾರ್ ಭೇಟಿ

Related Articles

Back to top button