Latest

ಮುಂಬೈನಲ್ಲಿ ಯುವಕಾಂಗ್ರೆಸ್ ಪ್ರತಿಭಟನೆ

ಪ್ರಗತಿವಾಹಿನಿ ಸುದ್ದಿ, ಮುಂಬಯಿ : 
ರಾಜೀನಾಮೆ ನೀಡಿ ಮುಂಬಯಿಯ ಸೊಫಿಟೆಲ್‌ ಹೊಟೇಲ್‌ನಲ್ಲಿ ತಂಗಿರುವ ಶಾಸಕರ ವಿರುದ್ಧ ಯುವ ಕಾಂಗ್ರೆಸ್‌ ಕಾರ್ಯಕರ್ತರು  ಪ್ರತಿಭಟನೆ ನಡೆಸಿದ್ದಾರೆ.
ರಾಜೀನಾಮೆ ನೀಡಿರುವ ಕಾಂಗ್ರೆಸ್‌ ಶಾಸಕರಾದ ರಮೇಶ್‌ ಜಾರಕಿಹೊಳಿ, ಬೈರತಿ ಬಸವರಾಜ್‌, ಎಸ್‌.ಟಿ.ಸೋಮ ಶೇಖರ, ಬಿ.ಸಿ.ಪಾಟೀಲ್‌, ಮಹೇಶ್‌ ಕುಮಟಳ್ಳಿ, ಪ್ರತಾಪಗೌಡ ಪಾಟೀಲ್‌, ಶಿವರಾಮ್‌ ಹೆಬ್ಟಾರ್‌ ಅವರು ಹೊಟೇಲ್‌ನಲ್ಲಿದ್ದಾರೆ
 ಜೆಡಿಎಸ್‌ ಶಾಸಕರಾದ ವಿಶ್ವನಾಥ್‌, ಗೋಪಾಲಯ್ಯ, ನಾರಾಯಣ ಸ್ವಾಮಿ ಸಹ ಅಲ್ಲೇ ಇದ್ದಾರೆ.
ಹೊಟೇಲ್‌ಗೆ ಪೊಲೀಸ್‌ ಬಿಗಿ ಭದ್ರತೆ ಒದಗಿಸಲಾಗಿದೆ. ಹೊಟೇಲ್‌ ಒಳಗೆ ಹೊಟೇಲ್‌ನ ಸಿಬಂದಿ ಭದ್ರತೆ ಕೈಗೊಂಡಿದ್ದು, ಹೊರಗೆ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ.
ಹೊಟೇಲ್‌ಗೆ ಶಾಸಕರ ಆಪ್ತರಾಗಿರುವ ಕೆಲ ಬಿಜೆಪಿ ಮತ್ತು ಕಾಂಗ್ರೆಸ್‌ ಮುಖಂಡರು ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ.

Related Articles

Back to top button