Belagavi NewsBelgaum NewsKarnataka NewsLatest

*ನದಿಯಲ್ಲಿ ಬಿದ್ದು ಯುವಕ ಸಾವು: ಶವ ಹೊರ ತೆಗೆದ ಸಮಾಜ ಸೇವಕರ ತಂಡ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಗೋಕಾಕ್‌ನಲ್ಲಿ ಹರಿಯುವ ಘಟಪ್ರಭಾ ನದಿಯ  ಸೌಂದರ್ಯ ಸವಿಯಲು ಹೋದ ಯುವಕನೊಬ್ಬ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದು, ಸಮಾಜ ಸೇವಕರ ತಂಡ ಮೃತ ದೇಹವನ್ನು ಹೊರತೆಗೆದಿದ್ದಾರೆ. 

ಗೋಕಾಕ್‌ನ ಘಟಪ್ರಭಾ ನದಿ ಬಳಿ ನಿನ್ನೆ ಸಂಜೆ ತೆರಳಿದ್ದ ಯುವಕನೊಬ್ಬ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಜಲಸಮಾಧಿಯಾಗಿದ್ದಾನೆ. ವಿಷಯ ತಿಳಿಯುತ್ತಿದ್ದಂತೆಯೇ ಬೆಳಗಾವಿಯ ಸಮಾಜ ಸೇವಕರಾದ ಅವಧೂತ್ ತುಡವೇಕರ್, ಪದ್ಮಪ್ರಸಾದ್ ಹೂಲಿ, ನಿಲೇಶ್ ಹಿರೇಹೊಳಿ ಮತ್ತು ಮೈಕೆಲ್ ಪಿಂಟೊ ಅವರನ್ನೊಳಗೊಂಡ ತಂಡವು ತಡರಾತ್ರಿಯೇ ಸ್ಥಳಕ್ಕೆ ಧಾವಿಸಿದೆ. 

Home add -Advt

ರಾಜ್ಯ ವಿಪತ್ತು ಸ್ಪಂದನಾ ಪಡೆ ಮತ್ತು ಗೋಕಾಕ್ ಅಗ್ನಿಶಾಮಕ ದಳದೊಂದಿಗೆ ಜಂಟಿಯಾಗಿ ಕಠಿಣ ಕಾರ್ಯಾಚರಣೆ ನಡೆಸಿ ಯುವಕನ ಮೃತದೇಹವನ್ನು ಯಶಸ್ವಿಯಾಗಿ ಹೊರತೆಗೆಯಲಾಗಿದೆ. 

ಜಲಪಾತ ಹಾಗೂ ನದಿ ತೀರಗಳಿಗೆ ಭೇಟಿ ನೀಡುವಾಗ ಪ್ರತಿಯೊಬ್ಬರೂ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಮತ್ತು ಎಚ್ಚರಿಕೆಯಿಂದ ಇರಬೇಕು ಎಂದು ದುರಂತದ ಬೆನ್ನಲ್ಲೇ ಸಮಾಜ ಸೇವಕರು ಮತ್ತು ರಕ್ಷಣಾ ಪಡೆಗಳು ಸಾರ್ವಜನಿಕರಿಗೆ ಹಾಗೂ ಪ್ರವಾಸಿಗರಿಗೆ ಕಳಕಳಿಯ ಮನವಿ ಮಾಡಿವೆ.

Related Articles

Back to top button