Cancer Hospital 2
Beereshwara 36
LaxmiTai 5

*ಶಾಸಕನ ಮನೆಯಲ್ಲಿಯೇ ಯುವಕ ಆತ್ಮಹತ್ಯೆ*

Anvekar 3

ಪ್ರಗತಿವಾಹಿನಿ ಸುದ್ದಿ; ಲಖನೌ: ಬಿಜೆಪಿ ಶಾಸಕರೊಬ್ಬರ ಫ್ಲಾಟ್ ನಲ್ಲಿಯೇ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಲಖನೌದಲ್ಲಿ ನಡೆದಿದೆ.

ಶ್ರೇಷ್ಠ ತಿವಾರಿ (24) ಆತ್ಮಹತ್ಯೆಗೆ ಶರಣಾದ ಯುವಕ. ಲಖನೌದ ಬಕ್ಷಿ ಕಾ ತಲಾಬ್ ನ ಬಿಜೆಪಿ ಶಾಸಕ ಯೋಗೇಶ್ ಶುಕ್ಲಾ ಅವರ ಮಾಧ್ಯಮ ಸಲಹೆಗಾರನಾಗಿದ್ದ ಶ್ರೇಷ್ಠ ತಿವಾರಿ ಪ್ರೀತಿಸಿದ ಯುವತಿಯೊಂದಿಗೆ ಜಗಳ ಮಾಡಿಕೊಂಡು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

Emergency Service

ಶಾಸಕರ ಅಧಿಕೃತ ನಿವಾಸದಲ್ಲಿಯೇ ಶ್ರೇಷ್ಠ ನೇಣಿಗೆ ಶರಣಾಗಿದ್ದಾರೆ. ಶ್ರೇಷ್ಠ ತಿವಾರಿ ಯುವತಿಯೊಬ್ಬರನ್ನು ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದರು. ಇಂದು ಬೆಳಿಗ್ಗೆ ಯುವತಿಯೊಂದಿಗೆ ಜಗಳವಾಡಿದ್ದು, ಬಳಿಕ ಯುವತಿಗೆ ಹಾಗೂ ಸ್ನೇಹಿತರಿಗೆ ಹೇಳಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಶ್ರೇಷ್ಠ ತಿವಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಯುವತಿಯೇ ಪೊಲೀಸರಿಗೆ ಕರೆ ಮಾಡಿ ತಿಳಿಸಿದ್ದು, ತಕ್ಷಣ ಪೊಲೀಸರೊಂದಿಗೆ ಯುವತಿ ಸ್ಥಳಕ್ಕೆ ಧಾವಿಸಿದ್ದಾಳೆ.

ಆದರೆ ಶ್ರೇಷ್ಠ ತಿವಾರಿ ಪೊಲೀಸರು ಆಗಮಿಸುವಷ್ಟರಲ್ಲಿ ಸಾವನ್ನಪ್ಪಿದ್ದಾರೆ. ಶ್ರೇಷ್ಠ ತಿವಾರಿ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Bottom Add3
Bottom Ad 2