ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಜೆಡಿಎಸ್ ಹಿರಿಯ ಮುಖಂಡ, ಮಾಜಿ ಶಾಸಕ ವೈ ಎಸ್ ವಿ ದತ್ತಾ, ಕಾಂಗ್ರೆಸ್ ಸೇರ್ಪಡೆಗೆ ಮುಂದಾಗಿದ್ದಾರಾ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಆರಂಭವಾಗಿರುವಗಲೇ, ವೈ ಎಸ್ ವಿ ದತ್ತಾ, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿರುವುದು ಕುತೂಹಲ ಇಮ್ಮಡಿಗೊಳಿಸಿದೆ.
ಕಡೂರು ಕ್ಷೇತ್ರದ ನೂರಾರು ಬೆಂಬಲಿಗರೊಂದಿಗೆ ಸಿದ್ದರಾಮಯ್ಯ ನಿವಾಸಕ್ಕೆ ಭೇಟಿ ನೀಡಿದ ವೈ ಎಸ್ ವಿ ದತ್ತಾ, ಕೆಲ ಸಮಯ ಸಮಾಲೋಚನೆ ನಡೆಸಿದರು. ಈ ವೇಳೆ ಬೆಂಬಲಿಗರು ದತ್ತಾ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳುವಂತೆ ಬಹಿರಂಗವಾಗಿ ಮನವಿ ಮಾಡಿದ್ದಾರೆ. ತಕ್ಷಣ ಕುರ್ಚಿಯಿಂದ ಎದ್ದು ನಿಂತ ವೈ ಎಸ್ ವಿ ದತ್ತಾ, ಬೆಂಬಲಿಗರಿಗೆ ಸುಮ್ಮನಿರುವಂತೆ ತಡೆದಿದ್ದಾರೆ.
ಸಿದ್ದರಾಮಯ್ಯ ಭೇಟಿ ಬಳಿಕ ಮಾತನಾಡಿದ ವೈ ಎಸ್ ವಿ ದತ್ತಾ, ಅಧಿವೇಶನದಲ್ಲಿ ರಾಗಿ ಬೆಳೆದ ರೈತರು ಹಾಗೂ ರೈತರ ಸಮಸ್ಯೆ ಬಗ್ಗೆ ಮಾತನಾಡುವಂತೆ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಲು ಭೇಟಿಯಾಗಿದ್ದೆ ಎಂದರು.
ಕಾಂಗ್ರೆಸ್ ಸೇರುವಂತೆ ಬೆಂಬಲಿಗರ ಒತ್ತಡ ವಿಚಾರವಾಗಿ ಮಾತನಾಡಿದ ಅವರು, ಬೆಂಬಲಿಗರ ಅಭಿಪ್ರಾಯ ತಪ್ಪು ಎಂದೂ ನಾನು ಹೇಳಲ್ಲ, ಸರಿ ಎಂತಲೂ ಹೇಳಲ್ಲ. ಈಗಲೇ ನಾನು ಈ ಬಗ್ಗೆ ಏನೂ ಹೇಳಲ್ಲ. ಸಧ್ಯಕ್ಕೆ ಮೌನವೇ ನನ್ನ ಉತ್ತರ ಎಂದು ಹೇಳಿದರು.
ಮಾಜಿ ಸಚಿವ ವಿನಯ್ ಕುಲ್ಕರ್ಣಿಗೆ ಹಿನ್ನಡೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ