ನಾಲ್ವರು ಕಾರ್ಯಾಧ್ಯಕ್ಷರ ನೇಮಕ ಸಮರ್ಥಿಸಿಕೊಂಡ ಸತೀಶ್ ಜಾರಕಿಹೊಳಿ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕೆಪಿಸಿಸಿಗೆ ನಾಲ್ವರು ಕಾರ್ಯಾಧ್ಯಕ್ಷರ ನೇಮಕದಲ್ಲಿ ಯಾವುದೇ ತೊಂದರೆಗಳಿಲ್ಲ. ಈ ಹಿಂದೆ ಕೆಪಿಸಿಸಿಗೆ ಇಬ್ಬರು ಕಾರ್ಯಾಧ್ಯಕ್ಷರು ಇದ್ದರು. ಇದೀಗ ನಾಲ್ವರು ಕಾರ್ಯಾಧ್ಯಕ್ಷರಿಗೆ ನಾವು ಬೇಡಿಕೆ ಇಟ್ಟದ್ದೇವೆ. ಪಕ್ಷದಲ್ಲಿ ಯಾವುದೇ ಹುದ್ದೆ ನೇಮಕ ಸಂದರ್ಭದಲ್ಲಿ ಗೊಂದಲ ಸಹಜ. ಎಲ್ಲರೂ ತಮ್ಮ ಅಭಿಪ್ರಾಯ ಹೇಳಲು ಸ್ವತಂತ್ರರು ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ನಾಲ್ವರು ಕಾರ್ಯಾಧ್ಯಕ್ಷರ ನೇಮಕ ಸಮರ್ಥಿಸಿಕೊಂಡಿದ್ದಾರೆ.

ಬೆಳಗಾವಿಯಲ್ಲಿ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷರ ನೇಮಕ ವಿಳಂಬ ಕುರಿತು ಮಾತನಾಡಿದರು. ದೆಹಲಿ ವಿಧಾನಸಭಾ ಚುನಾವಣೆ ಮುಗಿದ ಬಳಿ ಕೆಪಿಸಿಸಿ ಅಧ್ಯಕ್ಷ ಹೆಸರು ಘೋಷಣೆಯಾಗಲಿದೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಹೆಸರು ಘೋಷಣೆಯಲ್ಲಿ ವಿಳಂಬ ಆಗಿದೆ ಎಂದರು.

ಎಲ್ಲಾ ಮುಖಂಡರು ಬೇಗ ಅಧ್ಯಕ್ಷ ಹೆಸರು ಘೋಷಣೆ ಮಾಡಿ ಎಂದು ಹೈಕಮಾಂಡ್​​ಗೆ ಒತ್ತಡ ಹಾಕಿದ್ದಾರೆ. ಈ ಹಿಂದೆ ಕೆಪಿಸಿಸಿಗೆ ಇಬ್ಬರು ಕಾರ್ಯಾಧ್ಯಕ್ಷರು ಇದ್ದರು. ಇದೀಗ ನಾಲ್ವರು ಕಾರ್ಯಾಧ್ಯಕ್ಷರಿಗೆ ನಾವು ಬೇಡಿಕೆ ಇಟ್ಟದ್ದೇವೆ. ನಾವು ನಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದೇವೆ. ಪಕ್ಷದಲ್ಲಿ ಯಾವುದೇ ಹುದ್ದೆ ನೇಮಕ ಸಂದರ್ಭದಲ್ಲಿ ಗೊಂದಲ ಸಹಜ ಎಂದು ಹೇಳಿದರು. ಈಗ ಸಿಎಂ ಬಿ ಎಸ್ ಯಡಿಯೂರಪ್ಪ ಮೂವರನ್ನು ಡಿಸಿಎಂ ಮಾಡಿದ್ದಾರೆ. ಹಾಗಂತ ಅವರ ಪ್ರಭಾವ ಏನು ಕಮ್ಮಿ ಆಗಿದೆಯೇ? ಅಂತೆಯೆ ನಾಲ್ವರು ಕಾರ್ಯಾಧ್ಯಕ್ಷ ನೇಮಕದಿಂದ ಕೆಪಿಸಿಸಿ ಅಧ್ಯಕ್ಷರ ಪ್ರಭಾವ ಕಡಿಮೆಯಾಗಲ್ಲ ಎಂದು ತಿಳಿಸಿದರು.

ಇನ್ನು ರಾಜ್ಯ ಸಚಿವ ಸಂಪುಟ ವಿಳಂಬದ ಬಗ್ಗೆ ಪ್ರತಿಕ್ರಿಯಿಸಿದ ಸತೀಶ್ ಜಾರಕಿಹೊಳಿ, ಶೀಘ್ರವೇ ಸಂಪುಟ ವಿಸ್ತರಣೆ ಆದರೆ ಆಡಳಿತ ದೃಷ್ಠಿಯಿಂದ ಉತ್ತಮ. ಅರ್ಹರು ಈಗಾಗಲೇ ಅತಂತ್ರರಾಗಿದ್ದಾರೆ. ಎಲ್ಲರನ್ನೂ ಸಚಿವರನ್ನಾಗಿ ಮಾಡಿ ಎಂದು ಪಟ್ಟು ಹಿಡಿದಿದ್ದಾರೆ. ಎಲ್ಲಾ ಅನರ್ಹರಿಗೆ ಸ್ಥಾನಮಾನ ನೀಡಲು ಸಾಧ್ಯವಿಲ್ಲ. ಅಸಮಾಧಾನ ಬಹಿರಂಗ ಆಗದೇ ಇರಬಹುದು. ಆದರೆ, ಅಸಮಾಧಾನವಂತು ಇದೆ. ತೃಪ್ತರನ್ನಾಗಿಸಲು ಸಾಧ್ಯವಿಲ್ಲ ಎಂದರು.

Home add -Advt

Related Articles

Back to top button