*ಮುಸ್ಲೀಂರಿಂದಲೇ ಶೇ.90ರಷ್ಟು ವಕ್ಫ್ ಜಾಗ ಒತ್ತುವರಿ; ಹಿಂದೂಗಳು ಕೇವಲ ಶೇ.10ರಷ್ಟಿದ್ದಾರೆ: ಸಚಿವ ಜಮೀರ್ ಅಹ್ಮದ್*
ಪ್ರಗತಿವಾಹಿನಿ ಸುದ್ದಿ: ವಕ್ಪ್ ಬೋರ್ಡ್ ನಿಂದ ರೈತರಿಗೆ ನಿದಲಾಗಿದ್ದ ನೋಟಿಸ್ ಹಿಂಪಡೆಯುವಂತೆ ಸಿಎಂ ಸಿದ್ದರಾಮಯ್ಯ ಖಡಕ್ ಆದೇಶ ನೀಡಿದ್ದು, ಈ ಬೆಳವಣಿಗೆ ಬೆನ್ನಲೇ ಪ್ರತಿಕ್ರಿಯಿಸಿರುವ ವಸತಿ ಸಚಿವ ಜಮೀರ್ ಅಹ್ಮದ್, ರೈತರ ಜಮೀನನ್ನು ಯಾವುದೇ ಕಾರಣಕ್ಕೂ ತೆಗೆದುಕೊಳ್ಳುವುದಿಲ್ಲ ಎಂದಿದ್ದಾರೆ.
ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಡಿದ ಸಚಿವ ಜಮೀರ್ ಅಹ್ಮದ್, ವಕ್ಫ್ ಬಳಿ ಇರುವುದು ಸರ್ಕಾರ ಕೊತ್ಟ ಜಮೀನಲ್ಲ. ದಾನಿಗಳು ಕೊಟ್ಟ ಜಮೀನು. ರೈತರ ಜಮೀನನ್ನು ಯಾವ ಕಾರಣಕ್ಕೂ ತೆಗೆದುಕೊಳ್ಳಲ್ಲ. ಈಗಾಗಲೇ ಸರ್ಕಾರ ಕೂಡ ನೋಟಿಸ್ ಹಿಂಪಡೆಯಲು ಅಧಿಕಾರಿಗಳಿಗೆ ಸೂಚಿಸಿದೆ ಎಂದರು.
ನಮ್ಮ ಅನ್ನದಾತರು, ರೈತರು ಅವರ ಜಮೀನು ತೆಗೆದುಕೊಳ್ಳೊಕೆ ಅಗುತ್ತಾ? ರಾಜ್ಯದಲ್ಲಿ ವಕ್ಪ್ ಬೋರ್ಡ್ ಜಮೀನು ಒತ್ತುವರಿಯಾಗಿದೆ. 90 ಪ್ರತಿಶತ ಮುಸ್ಲಿಮರೇ ಒತ್ತುವರಿ ಮಾಡಿದ್ದಾರೆ, ಪಾಪ ಹಿಂದೂಗಳು ಕೇವಲ 10 ಪರ್ಸೆಂಟ್ ಇದ್ದಾರೆ ಎಂದು ಇದೇ ವೇಳೆ ಜಮೀರ್ ಹೇಳಿದ್ದಾರೆ.
ಇದೇ ವೇಳೆ ವಕ್ಫ್ ಕಾನೂನು ತಿದ್ದುಪಡಿ ಮಾಡ್ಲು ಕೇಂದ್ರ ಹೊರಟಿದೆ. ತರಲಿ. ತಂದ ಬಳಿಕ ಮುಂದೇನು ಮಾಡಬೇಕು ಮಾಡುತ್ತೇವೆ ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ