Kannada NewsNational

*ಕೆರೆಗೆ ಬಿದ್ದ ಎಸ್‌ಯುವಿ ಕಾರು: 8 ಮಂದಿ ದುರ್ಮರಣ*

ಪ್ರಗತಿವಾಹಿನಿ ಸುದ್ದಿ: ವೇಗವಾಗಿ ಬಂದ ಎಸ್‌ಯುವಿ ಕಾರು ಕೆರೆಗೆ ಬಿದ್ದು 8 ಮಂದಿ ಮೃತಪಟ್ಟ ಘಟನೆ ಛತ್ತೀಸ್‌ಘಡದ ಬಲರಾಂಪುರದಲ್ಲಿ ನಡೆದಿದೆ.

ರಾಜ್‌ಪುರ-ಕುಸ್ಮ ರಸ್ತೆಯ ಲಾಡುವಾ ಗ್ರಾಮದ ಬಳಿ ವೇಗವಾಗಿ ಬಂದ ಕಾರು ಕೆರೆಗೆ ಬಿದ್ದ ಪರಿಣಾಮ ಬಾಲಕಿ ಸೇರಿದಂತೆ 8 ಮಂದಿ ಸಾವನ್ನಪ್ಪಿದ್ದಾರೆ. ಮೃತರೆಲ್ಲರನ್ನು ಕುಸ್ಮಿ ಪೊಲೀಸ್‌ ಠಾಣೆಯ ಲಾರಿಮಾ ಗ್ರಾಮದ ನಿವಾಸಿಗಳು ಎಂದು ಗುರುತಿಸಲಾಗಿದೆ. ಎಲ್ಲರೂ ಕಾರಿನಲ್ಲಿ ಲಾರಿಮಾದಿಂದ ಸೂರಜ್‌ಪುರಕ್ಕೆ ಹೋಗುತ್ತಿದ್ದರು. ರಾಜ್‌ಪುರಕ್ಕೆ ಹೋಗುವ ಮುನ್ನ ಲಾಡುವಾ ಗ್ರಾಮದ ಬಳಿ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಕೆರೆಗೆ ಬಿದ್ದಿದೆ ಎನ್ನಲಾಗಿದೆ.

Home add -Advt

ಅಪಘಾತದ ಸದ್ದು ಕೇಳಿ ಜನರು ಸ್ಥಳಕ್ಕೆ ಆಗಮಿಸಿದ್ದಾರೆ. ಈ ವೇಳೆ ಚಾಲಕನನ್ನು ಕಿಟಕಿಯಿಂದ ಹೊರ ತೆಗೆದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ನೀರಿಗೆ ಬಿದ್ದಿದ್ದರಿಂದ ಕಾರಿನ ಹಿಂದಿನ ಭಾಗ ನೀರಿನಲ್ಲಿ ಮುಳುಗಿದೆ. ಪರಿಣಾಮ ಕಾರಿನ ಎಲ್ಲಾ ಬಾಗಿಲುಗಳು ಲಾಕ್ ಆಗಿದ್ದವು. ಇದರಿಂದ ಕಾರಿನಲ್ಲಿದ್ದವರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.

Related Articles

Back to top button