National

*ಸಿಎಂ ಯೋಗಿ ಆದಿತ್ಯನಾಥ್ ಗೆ ಜೀವ ಬೆದರಿಕೆ: ಅಧಿಕಾರದಿಂದ ಕೆಳಗಿಳಿಯಲು ಡೆಡ್ ಲೈನ್*

ಪ್ರಗತಿವಾಹಿನಿ ಸುದ್ದಿ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗೆ ಜೀವ ಬೆದರಿಕೆ ಹಾಕಲಾಗಿದೆ. ಮುಂದಿನ ಹತ್ತು ದಿನಗಳಲ್ಲಿ ಅಧಿಕಾರದಿಂದ ಕೆಳಗಿಳಿಯದಿದ್ದರೆ ಎನ್ ಸಿ.ಪಿ.ನಾಯಕ ಬಾಬಾ ಸಿದ್ದೀಕಿ ಅನುಭವಿಸಿದ ಸ್ಥಿತಿ ಎದುರಿಸಬೇಕಾಗುತ್ತೆ ಎಂದು ಮುಂಬೈ ಪೊಲೀಸ್ ಸಂಚಾರ ದಳ ನಿಯಂತ್ರಣ ಕೊಠಡಿಗೆ ಸಂದೇಶ ರವಾನಿಸಲಾಗಿದೆ.

ಅಪರಿಚಿತ ಸಂಖ್ಯೆಯಿಂದ ಈ ಬಗ್ಗೆ ಮುಂಬೈ ಪೊಲೀಸರರಿಗೆ ಬೆದರಿಕೆ ಸಂದೇಶ ಬಂದಿದೆ. ಈ ಬಗ್ಗೆ ಮುಂಬೈ ಪೊಲೀಸರು ಉತ್ತರ ಪ್ರದೇಶ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

Home add -Advt

ಈಗಾಗಲೇ ಬೆದರಿಕೆಸಂದೇಶದ ಬಗ್ಗೆ ತನಿಖೆ ಆರಂಭವಾಗಿದ್ದು, ಸಿಎ ಯೋಗಿ ಆದಿತ್ಯನಾಥ್ ಭದ್ರತೆ ಹೆಚ್ಚಿಸಲಾಗಿದೆ.

Related Articles

Back to top button