ಪ್ರಗತಿವಾಹಿನಿ ಸುದ್ದಿ: 2024ನೇ ಇಸವಿ ಜನವರಿಯಿಂದ ಡಿಸೆಂಬರ್ ಅಂತ್ಯದವರೆಗಿನ ಕಾರ್ಯನಿರ್ವಹಣೆ ಪರಿಗಣಿಸಿ ಅತ್ಯುತ್ತಮ ಜಿಲ್ಲಾ ಹಾಗೂ ತಾಲೂಕು ಸಂಘ ಪ್ರಶಸ್ತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ತುಮಕೂರಿನಲ್ಲಿ ಆಯೋಜಿಸಿರುವ ರಾಜ್ಯ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ.
ಪ್ರಸ್ತುತ ವರ್ಷದಲ್ಲಿ ಜಿಲ್ಲಾ ಹಾಗೂ ತಾಲೂಕು ಸಂಘಗಳು ಮಾಡಿರುವ ಕಾರ್ಯ ಚಟುವಟಿಕೆಗಳನ್ನು ಆಧಾರ ಸಹಿತ ಸಲ್ಲಿಸಬೇಕು.
ಸಂಘದ ಆಡಳಿತ ಮಂಡಳಿ ಸಭೆ, ಕಾರ್ಯಕಾರಿ ಸಮಿತಿ ಸಭೆ, ವಾರ್ಷಿಕ ಮಹಾಸಭೆ, ಲೆಕ್ಕಾಚಾರದ ದಾಖಲೆ ಸಲ್ಲಿಸಬೇಕು.
ಕಾರ್ಯಾಗಾರ, ಪ್ರಶಸ್ತಿ ಪ್ರದಾನ, ಕ್ರೀಡಾಕೂಟ, ಪತ್ರಿಕಾ ದಿನಾಚರಣೆ, ರಾಷ್ಟ್ರೀಯ ಹಬ್ಬಗಳ ಆಚರಣೆ, ಶಿಕ್ಷಣ- ಆರೋಗ್ಯಕ್ಕೆ ನೆರವು, ಸಂಘದ ಸದಸ್ಯರು ಹಾಗೂ ಕುಟುಂಬ ಸದಸ್ಯರಿಗೆ ಆಯೋಜಿಸಿದ ಕಾರ್ಯಕ್ರಮಗಳು, ಸದಸ್ಯರ ಪರವಾಗಿ ನಡೆದ ಹೋರಾಟಗಳು, ರಾಜ್ಯ, ಜಿಲ್ಲಾ ಮಟ್ಟದ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ದಾಖಲೆ ಸಹಿತ ಮಾಹಿತಿ ಸಲ್ಲಿಸಬೇಕು.
ಇದು ಹೊರತು ಪಡಿಸಿದಂತೆ ಸಂಘ ಆಯೋಜಿಸಿರುವ ಕಾರ್ಯ ಚಟುವಟಿಕೆಗಳ ದಾಖಲೆ ಸಲ್ಲಿಸಬೇಕು.
ಎಲ್ಲಾ ಕಾರ್ಯ ಚಟುವಟಿಕೆಗೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ಪ್ರಕಟವಾದ ವರದಿ, ನಡಾವಳಿಕೆ ಪುಸ್ತಕದಲ್ಲಿ ದಾಖಲಾದ ವಿವರದ ನಕಲು ಸಲ್ಲಿಸಬೇಕು.
ಅತ್ಯುತ್ತಮ ಜಿಲ್ಲಾ ಹಾಗೂ ತಾಲೂಕು ಸಂಘ ಪ್ರಶಸ್ತಿಗೆ ಜನವರಿ 8 ರೊಳಗೆ ದಾಖಲೆ ಸಹಿತ ಅರ್ಜಿ ಸಲ್ಲಿಸಬೇಕು. ನಿಗದಿತ ಅವಧಿ ಬಳಿಕ ಬಂದ ಅರ್ಜಿಗಳನ್ನು ಪರಿಗಣಿಸುವುದಿಲ್ಲ.
ದಾಖಲೆ ಸಹಿತ ಅರ್ಜಿಯನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಗೆ ತಲುಪಿಸಬೇಕು.
(ಈ ಹಿಂದೆ ಈಗಾಗಲೇ ಪ್ರಶಸ್ತಿ ನೀಡಿದ್ದರೆ ಮತ್ತೆ ಆ ಸಂಘಗಳ ಅರ್ಜಿ ಪರಿಗಣಿಸುವುದಿಲ್ಲ)
ಹೆಚ್ಚಿನ ಮಾಹಿತಿಗೆ ರಾಜ್ಯ ಉಪಾಧ್ಯಕ್ಷರಾದ ಅಜ್ಜಮಾಡ ರಮೇಶ್ ಕುಟ್ಟಪ್ಪ (9880060229) ಅವರನ್ನು ಸಂಪರ್ಕಿಸಿಬಹುದು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ