Belagavi NewsBelgaum NewsElection NewsKarnataka News

*ಜಿಪಂ, ತಾಪಂ ಚುನಾವಣೆ ಬಗ್ಗೆ ಮುಖ್ಯಮಾಹಿತಿ ಚುನಾವಣಾ ಆಯೋಗದ ಆಯುಕ್ತ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಏಪ್ರಿಲ್, ಮೇ ನಲ್ಲಿ ಜಿಲ್ಲಾ ಪಂಚಾಯತಿ ಹಾಗೂ ತಾಲೂಕ ಪಂಚಾಯತ ಚುನಾವಣೆ ನಡೆಯುವ ಸಾಧ್ಯತೆಗಳಿದ್ದು, ಬ್ಯಾಲೆಟ್ ಪೇಪರ್ ಮೂಲಕ ‌ಚುನಾವಣೆ ನಡೆಸಲು ಚರ್ಚೆ ನಡೆಯುತ್ತಿದೆ ಎಂದು ರಾಜ್ಯ‌ ಚುನಾವಣೆ ಆಯುಕ್ತ ‌ಜಿ ಎಸ್ ಸಂಗ್ರೇಶಿ ಅವರು ಮಾಹಿತಿ ನೀಡಿದರು.‌

ಬೆಳಗಾವಿಯ ಜಿಲ್ಲಾಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮುಂಬರುವ ಜಿಲ್ಲಾ ಪಂಚಾಯತ ಹಾಗೂ ತಾಲೂಕ ಪಂಚಾಯತ ಚುನಾವಣೆ ಸಿದ್ಧತೆ ಬಗ್ಗೆ ಬೆಳಗಾವಿ ಜಿಲ್ಲಾಧಿಕಾರಿಗಳ ಜೊತೆ ಸಭೆ ಮಾಡಿದ್ದೇವೆ. ಮತದಾರ ಪಟ್ಟಿ ಸಿದ್ದಪಡಿಸಬೇಕು. 18 ವರ್ಷ ತುಂಬಿದ ಎಲ್ಲಾ ಯುವಕ, ಯುವತಿರನ್ನು ಈ ಪಟ್ಟಿಗೆ ಸೇರಿಸಬೇಕು. ಈ ನಿಟ್ಟಿನಲ್ಲಿ ‌ಮಾರ್ಗದರ್ಶನ ನೀಡಲಾಗಿದೆ. ಎಪ್ರಿಲ್, ಮೇ ನಲ್ಲಿ ಜಿಪಂ, ತಾಪಂ ಚುನಾವಣೆ ಮಾಡಬೇಕಿದೆ. ಮೀಸಲಾತಿ ಕಾರ್ಯಸೂಚಿ ಸಂಬಂಧಪಟ್ಟ ಪಂಚಾಯತ್ ಇಲಾಖೆ ಕೊಡುವುದು ಬಾಕಿ ಇದೆ. ಈ ಮಾಹಿತಿ ಬಂದ ತಕ್ಷಣವೇ ದಿನಾಂಕ ನಿಗದಿ ಮಾಡ್ತಿವಿ. ಎಪ್ರಿಲ್ ,  ಮೇ ನಲ್ಲಿ ಚುನಾವಣೆ ಮಾಡೋದಕ್ಕೆ ಸರ್ಕಾರ ಕೂಡಾ ಸ್ಪಂದಿಸಿದೆ ಎಂದರು.‌

ಜಿಪಂ, ತಾಪಂ ಎರಡಕ್ಕೂ ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ಮಾಡಬೇಕು ಎನ್ನುವುದು ನಮ್ಮ ಅಭಿಪ್ರಾಯವು ಆಗಿದೆ‌. ಬ್ಯಾಲೆಟ್ ಪೇಪರ್ ಮೂಲಕವೇ ಚುನಾವಣೆ ಮಾಡಬೇಕು‌. ಎಲ್ಲಾ ಚುನಾವಣೆ ನೋಡಿದಾಗ ಮತದಾರರು ಜಾಗೃತರಾಗಬೇಕು. ಮತದಾರರು ಹಣ, ಹೆಂಡಕ್ಕೆ ಬಲಿಯಾಗವಾರದು. ಭ್ರಷ್ಟಾಚಾರ ರಹಿತ ಆಡಳಿತ ಕೊಡಲು ಆಗಲ್ಲ‌‌. ಮತದಾರರ ಮನಸ್ಸು ಗೆಲ್ಲುವ ಪ್ರಕ್ರಿಯೆಯಲ್ಲಿ ಹಣ ಹಂಚಿಕೆ ಆಗಬಾರದು‌. ಒಬ್ಬರಿಗೆ ಒಂದು ಸಾವಿರ ಎನ್ನುವ ಮನಸ್ಥಿತಿ ಹೊಗಬೇಕು ಎಂದರು. 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button