Latest

ಜೊಮೆಟೋ ಡ್ರೆಸ್ ಹಾಕಿಕೊಂಡು ಪಾರ್ಸೆಲ್ ಹೊತ್ತು ಈ ವ್ಯಕ್ತಿ ಮನೆ ಬಾಗಿಲಿಗೆ ಬರ್ತಾನೆ ಇದಾರೆ; ಯಾರಿಗೂ ಗುರುತೇ ಸಿಕ್ಕಿಲ್ಲ !

ಪ್ರಗತಿವಾಹಿನಿ ಸುದ್ದಿ, ಮುಂಬೈ: ಪ್ರಸಿದ್ಧ ಆಹಾರ ಪೂರೈಕೆ ಕಂಪನಿ ಜೊಮ್ಯಾಟೊ ( zomato) ಕುರಿತು ಅತ್ಯಂತ ಕುತೂಹಲಕಾರಿ ಸಂಗತಿಯೊಂದು ಹೊರಬಿದ್ದಿದೆ. ಜೊಮ್ಯಾಟೊದ ಚೀಫ್ ಎಕ್ಸಿಕ್ಯುಟಿವ್ ಆಫೀಸರ್ ಆಗಿರುವ ದೀಪಿಂದರ್ ಗೋಯಲ್ ಅವರು ಪ್ರತಿ ಮೂರು ತಿಂಗಳಿಗೊಮ್ಮೆ ಒಂದಿಡೀ ದಿನ ಮನೆ ಮನೆಗೆ ಫುಡ್ ಡೆಲಿವರಿ ಮಾಡುತ್ತಿದ್ದಾರೆ. ಕಳೆದ ಮೂರು ವರ್ಷಗಳಿಂದ ಅವರು ಈ ಕಾರ್ಯವನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಮಾಡುತ್ತಿದ್ದರೆ. ಆ ನಿರ್ಧಿಷ್ಟ ದಿನದಂದು ಜೊಮ್ಯಾಟೊ ಫುಡ್ ಡೆಲಿವರಿ ಬಾಯ್ ಗಳ ಕೆಂಪು ಟಿ ಷರ್ಟ್ ಧರಿಸಿ, ಗ್ರಾಹಕರು ಮಾಡುವ ಆಹಾರದ ಆರ್ಡಗಳನ್ನು ಅವರ ಮನೆಗೆ ತಲುಪಿಸುವ ಕೆಲಸವನ್ನು ಸಿಇಒ ಆಗಿರುವ ದೀಪಿಂದರ್ ಗೋಯಲ್ ಮಾಡುತ್ತ ಬಂದಿದ್ದಾರೆ. ಆದರೆ ಇದುವರೆಗೂ ಯಾವೊಬ್ಬ ಗ್ರಾಹಕನೂ ಅವರ ಗುರುತು ಹಿಡಿದಿಲ್ಲವಂತೆ !

ನೌಕರಿ ಡಾಟ್ ಕಾಮ್ ನ ಮಾಲೀಕ ಹಾಗೂ ಜೊಮೆಟೋದ ಪಾಲುದಾರ ಸಂಜೀವ ಬಿಕ್ಚಂದಾನಿ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಸಿಇಒ ಮಾತ್ರವಲ್ಲದೆ ಜೊಮ್ಯಾಟೊದ ಬಹುತೇಕ ಹಿರಿಯ ಅಧಿಕಾರಿಗಳು ಪ್ರತಿ ಮೂರು ತಿಂಗಳಿಗೊಮ್ಮೆ ಕೆಂಪು ಟಿ ಷರ್ಟ್ ಧರಿಸಿ , ಸಾಮಾನ್ಯ ಜೊಮ್ಯಾಟೊ ಫುಡ್ ಡೆಲಿವರಿ ಬಾಯ್ ಗಳಂತೆ ಮೋಟರ್ ಸೈಕಲ್ ನಲ್ಲಿ ಗ್ರಾಹಕರ ಮನೆಗಳಿಗೆ ಆಹಾರ ಪೂರೈಕೆಯ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ ಎಂದು ಬಿಕ್ಚಂದಾನಿ ಹೇಳಿದ್ದಾರೆ.

ಗ್ರಾಹಕರ ಬೇಡಿಕೆಗಳು, ಜೊಮ್ಯಾಟೊದ ಸೇವೆಯ ಬಗ್ಗೆ ಗ್ರಾಹಕರ ಅಭಿಪ್ರಾಯ ಮೊದಲಾಗಿ ತಳ ಹಂತದಲ್ಲಿ ಗ್ರಾಹಕರ ವಿಚಾರಗಳ ಕುರಿತು ನೇರವಾಗಿ ಕಂಪನಿಯ ಸಿಇಒ ಮಟ್ಟದ ಅಧಿಕಾರಿಗಳು ಅರಿಯಲು ಸಾಧ್ಯವಾಗುತ್ತದೆ. ಕಂಪನಿಯನ್ನು ಇನ್ನಷ್ಟು ಅಭಿವೃದ್ಧಿಪಡಿಸಲು ಸಹಾಯಕವಾಗಬಲ್ಲದು ಎಂಬುದು ಈ ಕುತೂಹಲಕಾರಿ ನಡೆಯ ಹಿಂದಿನ ಗುಟ್ಟಾಗಿದೆ.

ದಯವಿಟ್ಟು ಆ ರೀತಿ ಹೇಳಬೇಡಿ…ಶ್ರೀರಾಮಚಂದ್ರನ ಪಾದದ ಧೂಳಿಗೂ ನಾನು ಸಮನಲ್ಲ ಎಂದ ಸಿಎಂ

Home add -Advt

https://pragati.taskdun.com/politics/cm-basavaraj-bommaishreeramuluraju-gowda/

Related Articles

Back to top button