Latest

ಅಟಲ್ ಬಿಹಾರಿ ವಾಜಪೇಯಿ ಜನ್ಮ ದಿನ ಆಚರಣೆ

 

   

   ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಮಾಜಿ ಪ್ರಧಾನಿ, ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಜನ್ಮ ದಿನದ ನಿಮಿತ್ತ ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ವತಿಯಿಂದ ಗೋಮಟೇಶ ವಿದ್ಯಾಪೀಠದಲ್ಲಿ ಸುಶಾಸನ ದಿನವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಸಂಜಯ ಪಾಟೀಲ ಅಟಲ್ ಬಿಹಾರಿ ವಾಜಪೇಯಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಅಟಲ ಬಿಹಾರಿ ವಾಜಪೇಯಿ ದೇಶದಲ್ಲಿ ಭಾರತೀಯ ಜನತಾ ಪಾರ್ಟಿಯನ್ನು ಬಲಿಷ್ಟವಾಗಿ ಸಂಘಟಿಸಿ, ಹಲವಾರು ಯೋಜನೆಗಳ ಮೂಲಕ ಭಾರತವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ದರು. ಇವರು ಅಂಧೇರಾ ಚಟೇಗಾ ಸೂರಜ ನಿಕಲೇಗಾ ಕಮಲ ಖಿಲೇಗಾ ಎಂಬ ಘೋಷಣೆಯೊಂದಿಗೆ ಕಾರ್ಯಕರ್ತರನ್ನು ಹುರದುಂಬಿಸಿದ್ದರು ಎಂದು ಹೇಳಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ ಮೋಹಿತೆ, ಯುವ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯ ಯುವರಾಜ ಜಾಧವ, ಮಂಡಳ ಪ್ರಧಾನ ಕಾರ್ಯದರ್ಶಿಗಳಾದ ಪ್ರವೀಣ ಪಾಟೀಲ, ರವಿ ಕೊಟಬಾಗಿ, ತಾಲೂಕಾ ಪಂಚಾಯತ ಸದಸ್ಯರಾದ ರಂಜನಾ ಅರುಣ ಕೋಲಕಾರ, ಹಿರಿಯ ಮುಖಂಡರಾದ ಹೇಮಂತ ಪಾಟೀಲ, ಜಿಲ್ಲಾ ಪಂಚಾಯತ ಸದಸ್ಯರಾದ ಸುಮನ ಪಾಟೀಲ, ಯುವ ಮೋರ್ಚಾ ಅಧ್ಯಕ್ಷರಾದ ಚೇತನ ಪಾಟೀಲ, ಕಪೀಲ ತ್ಯಾಗಿ, ವೀರಭದ್ರಯ್ಯಾ ಪೂಜೇರ, ಡಾ:ಯಲ್ಲಪ್ಪಾ ಪಾಟೀಲ, ಮಂಜು ಧರೆಣ್ಣವರ, ಅಭಯ ಅವಲಕ್ಕಿ ಮೊದಲಾದವರು ಪಾಲ್ಗೊಂಡಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button