ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಸಂಸತ್ತಿನಲ್ಲಿ ಶಾಸನ ರೂಪಿಸುವಂತೆ ಬೆಳಗಾವಿಯಲ್ಲಿ ಮಂಗಳವಾರ ನಡೆದ ಬೃಹತ್ ಜನಾಗ್ರಹ ಸಭೆ ಒತ್ತಾಯಿಸಿದೆ.
ಈ ಕುರಿತು ನಿರ್ಣಯ ಅಂಗೀಕರಿಸಿದ ಸಭೆ ಸಂಸದ ಸುರೇಶ ಅಂಗಡಿ ಮೂಲಕ ರಾಷ್ಟ್ರಪತಿಗೆ ಕಳುಹಿಸಲಾಯಿತು. ರಾಮಮಂದಿರ ನಿರ್ಮಾಣಕ್ಕಾಗಿ ಹಿಂದಿನಿಂದಲೂ ಹೋರಾಟ ನಡೆಯುತ್ತಲೇ ಬಂದಿದ್ದರೂ ಅದು ಈಡೇರಿಲ್ಲ. ಇದರಿಂದ ಪ್ರತಿಯೊಬ್ಬ ಹಿಂದೂವಿಗೂ ನಿರಾಸೆಯಾಗಿದೆ. ಪ್ರಕರಣ ನ್ಯಾಯಾಲಯದಲ್ಲಿ ಶೀಘ್ರ ಇತ್ಯರ್ಥವಾಗುವ ಲಕ್ಷಣವೂ ಕಾಣುತ್ತಿಲ್ಲ. ಹಾಗಾಗಿ ಈ ಕುರಿತು ಶಾಸನ ರಚಿಸುವುದು ಮಾತ್ರ ಉಳಿದಿರುವ ದಾರಿ ಎಂದು ನಿರ್ಣಯಲ್ಲಿ ಅಭಿಪ್ರಾಯಪಡಲಾಗಿದೆ.
ಅಮರಾವತಿಯ ಜೀತೇಂದ್ರ ಗುರುಮನೋಹರನಾಥ ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದರು. ಹಲವಾರು ಮಠಾಧೀಶರು, ಗಣ್ಯರು ಪಾಲ್ಗೊಂಡಿದ್ದರು. ವಿಶ್ವಹಿಂದೂ ಪರಿಷತ್ ಹಾಗೂ ಬಜರಂಗದಳ ಸಮವೇಶ ಆಯೋಜಿಸಿದ್ದವು.