Latest

ಅರುಣ ಜೈಟ್ಲಿ, ಅಮಿತ್ ಶಾ ಅನಾರೋಗ್ಯ: ಆಸ್ಪತ್ರೆಗೆ ದಾಖಲು

   ಪ್ರಗತಿವಾಹಿನಿ ಸುದ್ದಿ, ನವದೆಹಲಿ
ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಅಂಗಾಂಶ ಕ್ಯಾನ್ಸರ್ ನಿಂದ ಬಳಲುತ್ತಿದ್ದು, ವೈದಕೀಯ ಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳಿದ್ದಾರೆ. ಅವರು ಕಿಮೋಥೆರಫಿಗೆ ಒಳಗಾಗುವ ಸಾಧ್ಯತೆ ಇದ್ದು, ಹಾಗಾಗಿ ಅವರು ಈ ಬಾರಿ ಬಜೆಟ್ ಮಂಡಿಸುವುದು ಸಂಶಯವಾಗಿದೆ.
ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಅರುಣ್ ಜೇಟ್ಲಿ ಅವರಿಗೆ ಕಳೆದ ವರ್ಷ ಚಿಕಿತ್ಸೆ ನೀಡಲಾಗಿತ್ತು. ಈಗ ಆರೋಗ್ಯ ಸಮಸ್ಯೆ  ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅಮೇರಿಕಾಕ್ಕೆ ತೆರಳಿದ್ದಾರೆ. ಎಷ್ಟು ದಿನ ಅಮೇರಿಕಾದಲ್ಲಿ ಇರಬೇಕು, ಎಷ್ಟು ದಿನ ಚಿಕಿತ್ಸೆ ನಡೆಯಲಿದೆ ಎನ್ನುವುದು ಖಚಿತವಾಗಿಲ್ಲ. 
ಅರುಣ ಜೈಟ್ಲಿ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿ ಟ್ವೀಟ್ ಮಾಡಿರುವ ಎಐಸಿಸಿ ಅಧ್ಯಕ್ಷ ರಾಹುಲ ಗಾಂಧಿ, ಶೀಘ್ರ ಗುಣಮುಖರಾಗಲೆಂದು ಹಾರೈಸಿದ್ದಾರೆ. 
ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ ಶಾ ಎಚ್1 ಎನ್1 ನಿಂದ ಬಳಲುತ್ತಿದ್ದು, ಅವರು ಸಹ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಭಿಮಾನಿಗಳ ಹಾರೈಕೆಯಿಂದ ಗುಣಮುಖವಾಗುತ್ತಿದ್ದೇನೆ ಎಂದು ಅವರು ಟ್ವೀಟ್ ಮಾಡಿದ್ದಾರೆ. 

Related Articles

Back to top button