ಪ್ರಗತಿವಾಹಿನಿ ಸುದ್ದಿ, ಬೆಂಗಳೂರು
ನೂತನವಾಗಿ ಸಂಪುಟ ಸೇರಿರುವ ಸಚಿವರಿಗೆ ಖಾತೆ ಹಂಚಿಕೆ ಬಹುತೇಕ ಅಂತಿಮ ಹಂತ ತಲುಪಿದ್ದು, ಎಂ.ಬಿ.ಪಾಟೀಲ್ ಗೆ ಗೃಹ, ಸತೀಶ್ ಜಾರಕಿಹೊಳಿಗೆ ಅರಣ್ಯ ಖಾತೆ ಸಿಗುವ ಸಾಧ್ಯತೆ ಇದೆ.
ಬುಧವಾರ ಖಾತೆ ಪಟ್ಟಿಯೊಂದಿಗೆ ನವದೆಹಲಿಗೆ ತೆರಳಿದ್ದ ರಾಜ್ಯ ಉಸ್ತುವಾರಿ ವೇಣುಗೋಪಾಲ ಪಕ್ಷದ ಹೈಕಮಾಂಡ್ ಒಪ್ಪಿಗೆ ಪಡೆದಿದ್ದು, ಅಧಿಕೃತ ಘೋಷಣೆ ರಾತ್ರಿ ಇಲ್ಲವೇ ಶುಕ್ರವಾರ ಆಗಬಹುದು.
ಎಂಟಿಬಿ ನಾಗರಾಜುಗೆ ವಸತಿ, ರಹೀಂ ಖಾನ್ ಗೆ ಯುವಜನಸೇವೆ ಮತ್ತು ಕ್ರೀಡೆ, ಆರ್.ಬಿ.ತಿಮ್ಮಾಪುರಗೆ ಕೌಶಲ್ಯಾಭಿವೃದ್ಧಿ, ಪಿ.ಟಿ.ಪರಮೇಶ್ವರ ನಾಯ್ಕ್ ಗೆ ಮುಜರಾಯಿ ಮತ್ತು ಐಟಿಬಿಟಿ, ಇ.ತುಕಾರಾಮ್ ಗೆ ವೈದ್ಯಕೀಯ ಶಿಕ್ಷಣ ಹಾಗೂ ಸಿ.ಎಸ್.ಶಿವಳ್ಳಿಗೆ ಪೌರಾಡಳಿತ ಮತ್ತು ಬಂದರು ಖಾತೆ ನೀಡಲು ನಿರ್ಧರಿಸಲಾಗಿದೆ.
ಡಾ.ಜಿ.ಪರಮೇಶ್ವರ ಗೃಹ ಖಾತೆ ಬಿಟ್ಟುಕೊಡಲು ಒಪ್ಪದ್ದರಿಂದ ಮತ್ತು ಎಂ.ಬಿ.ಪಾಟೀಲ ಪ್ರಬಲ ಖಾತೆಗೆ ಪಟ್ಟು ಹಿಡಿದಿದ್ದರಿಂದ ಖಾತೆ ಹಂಚಿಕೆ ಬಿಕ್ಕಟ್ಟಾಗಿತ್ತು. ಹಾಗಾಗಿ ವೇಣುಗೋಪಾಲ ನವದೆಹಲಿಗೆ ತೆರಳಿ ಅಂತಿಮಗೊಳಿಸಬೇಕಾಯಿತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ