ಪ್ರಗತಿವಾಹಿನಿ ಸುದ್ದಿ, ಖಾನಾಪುರ
ಎಲ್ಲ ವಿದ್ಯಾಥಿಗಳೂ ಉತ್ತಿರ್ಣರಾಗಿ ರಾಜ್ಯಮಟ್ಟದ ಸಾಧನೆ ಮಾಡುವ ರೀತಿಯಲ್ಲಿ ತಯಾರಾಗಬೇಕು ಎಂದು ಬೆಳಗಾವಿ ಡಿಡಿಪಿಐ ಎ. ಬಿ. ಪುಂಡಲಿಕ ಕರೆ ನೀಡಿದ್ದಾರೆ.
ಎಸ್ಎಸ್ಎಲ್ ಸಿ ಫಲಿತಾಂಶ ಹೆಚ್ಚಿಸಲು ಖಾನಾಪುರದ ಮರಾಠಾ ಮಂಡಳ ತಾರಾರಾಣಿ ಪ್ರೌಢ ಶಾಲೆಯಲ್ಲಿನಡೆದ ಪ್ರಗತಿ ಪರೀಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಾಲೂಕಿನ ಎಲ್ಲ ಪ್ರೌಢ ಶಾಲೆಗಳ ಮುಖ್ಯೋಪಾಧ್ಯಾಯರಿಗೆ ಮಾರ್ಗದರ್ಶನ ಮಾಡಿದರು.
ಶಾಲೆಗಳಿಗೆ ರಜೆ ಘೊಷಣೆಯಾದಾಗ ಹೇಗೆ ಖುಷಿಯಾಗುತ್ತದೆಯೋ ಹಾಗೆಯೇ ಶಾಲಾ ಕೆಲಸದ ದಿನಗಳು ಕೂಡಾ ಹೆಚ್ಚಿಸಿ ಉತ್ತಮ ಕಲಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವಲ್ಲಿ ಶಿಕ್ಷಕರು ಖುಷಿ ಪಡಬೇಕು ಎಂದೂ ಪ್ರೆರಣೆ ನೀಡಿದರು.
ತಾಲೂಕಿನ ಕಲಿಕೆಯಲ್ಲಿ ಹಿಂದುಳಿದ ಎಲ್ಲ 383 ವಿದ್ಯಾರ್ಥಿಗಳು ಉತ್ತಿರ್ಣರಾಗಬೇಕು. ಇದಕ್ಕಾಗಿ ಎಲ್ಲ ಶಿಕ್ಷಕರು ಪಾಸಿಂಗ್ ಪ್ಯಾಕೆಜ್ ಕಡ್ಡಾಯವಾಗಿ ಈ ವಿದ್ಯಾಥಿಗಳಿಗೆ ನೀಡಿ ಕಾರ್ಯಪ್ರವೃತ್ತರಾಗಬೇಕು ಹಾಗೂ ರಾಜ್ಯಮಟ್ಟದ ಸಾಧನೆ ಮಾಡುವ ವಿದ್ಯಾರ್ಥಿಗಳು ಕೂಡಾ ತಾಲೂಕಿನಲ್ಲಿ ತಯಾರಗಬೇಕು ಎಂದೂ ಸೂಚಿಸಿದರು.
ಹತ್ತನೇ ತರಗತಿ ವಿದ್ಯಾರ್ಥಿಗಳಂತೆ ಎಂಟು ಮತ್ತು ಒಂಬತ್ತನೇ ತರಗತಿ ವಿದ್ಯಾಥಿಗಳ ಕಡೆಗೆ ಕೂಡಾ ಗಮನ ನೀಡಬೇಕು, ಹದನೆಂಟು ವರ್ಷ ವಯೋಮಾನದ ಒಳಗಿನ ಯಾವ ಮಗೂ ಕೂಡಾ ಶಾಲೆ ತೊರೆಯದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ತಾರಾರಾಣಿ ವಿದ್ಯಾರ್ಥಿನಿಯರು ಸ್ವಾಗತಿಸಿದರು. ಶಿಕ್ಷಣಾಧಿಕಾರಿ ಉಮಾ ಬರಗೇರ, ಫಲಿತಾಂಶ ಹೆಚ್ಚಿಸಲು ಕೈಗೊಂಡ ಕ್ರಿಯಯೋಜನೆ ಹಾಗೂ ಅನುಪಾಲನೆ ಕುರಿತಿ ವಿವರಿಸಿದರು.
ಕ್ಷೇತ್ರ ಸಮನ್ವಯಾಧಿಕಾರಿ ಎಸ್.ಎಮ್. ಬಿರ್ಜೆ ನೀರೂಪಿಸಿದರು. ಎಸ್ಎಸ್ಎಲ್ ಸಿ ನೊಡಲ್ ಅಧಿಕಾರಿ ಸಿ. ಎ. ಜೈನಾಪುರೆ ವಂದಿಸಿದರು.
ಈ ಸಭೆಯಲ್ಲಿ ತಾರಾರಾಣಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರಾದ ವ್ಹಿ.ಬಿ. ದೇಸಾಯಿ ಹಾಗೂ ತಾಲೂಕಿನ ಎಲ್ಲ ಮುಖ್ಯೋಪಾಧ್ಯಾಯರು ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ