ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ನಗರದ ಕೆಎಲ್‌ಎಸ್ ಗೋಗಟೆ ವಾಣಿಜ್ಯ ಮಹಾವಿದ್ಯಾಲಯದ ಐಕ್ಯುಎಸಿ ಅಡಿಯಲ್ಲಿ ಎಂಕಾಂ ವಿಭಾಗದ ವತಿಯಿಂದ ಕೇಂದ್ರ ಬಜೆಟ್ ವಿಮರ್ಶೆ ಮತ್ತು ವಿಶ್ಲೇಷಣೆ ಕುರಿತು ವಿಶೇಷ ಉಪನ್ಯಾಸ ಜರುಗಿತು.
ಸಂಪನ್ಮೂಲ ವ್ಯಕ್ತಿ ಡಾ. ಎ.ಬಿ. ಕಾಲಕುಂದ್ರಿಕರ ಮಾತನಾಡಿ, ಸರಕಾರವು ಪ್ರತಿಯೊಬ್ಬರಿಗೂ ಸರಕಾರಿ ಕೆಲಸ ಕೊಡಲು ಸಾಧ್ಯವಿಲ್ಲ. ಅದಕ್ಕೆ ಅದರದೆ ಆದ ಇತಿಮಿತಿಗಳಿವೆ. ಉದ್ಯಮಶೀಲತೆಯ ಬೆಳವಣಿಗೆಗಳಿಂದ ಕೆಲಸಗಳು ದೊರಕುತ್ತವೆ ಎಂದರು.
ಬಜೆಟ್‌ನ ಪ್ರಮುಖ ಅಂಶಗಳಾದ ರೈತರ ಸಮಸ್ಯೆಗಳು, ಮಧ್ಯಮ ವರ್ಗದ ಕುಟುಂಬಗಳಿಗೆ ನೀಡಲಾದ ಸೌಲಭ್ಯಗಳು, ಕಾರ್ಮಿಕರ ಸಮಸ್ಯೆಗಳಿಗೆ ಪರಿಹಾರಗಳ ವಿವರಿಸಿದ ಕಾಲಕುಂದ್ರಿಕರ, ಮಹಿಳಾ ಸಬಲೀಕರಣ, ಸಂವಹನ ಕ್ಷೇತ್ರದ ಕ್ರಾಂತಿ, ಕೃತಕ ಬುದ್ಧಿಮತ್ತೆಯ ಕ್ಷೇತದಲ್ಲಿನ ಪ್ರಚಂಡ ಬದಲಾವಣೆಗಳ ಬಗ್ಗೆ ತಿಳಿಸಿದರು.
ಪ್ರಾಂಶುಪಾಲ ಡಾ. ಎಚ್.ಎಚ್. ವೀರಾಪುರ ಅಧ್ಯಕ್ಷತೆ ವಹಿಸಿದ್ದರು. ಎಂಕಾಂ ವಿಭಾಗದ ಮುಖ್ಯಸ್ಥ ಡಾ. ಹರ್ಷಲ್ ಥಾಮನಕರ ಸಂಯೋಜಿಸಿ, ವಂದಿಸಿದರು. ಕು. ವಿಜೇತಾ ಶೇಟ ನಿರೂಪಿಸಿದರು. ಸಂದೀಪ ಹಳ್ಳೂರ ತಾಂತ್ರಿಕ ಸಹಾಯ ನೀಡಿದರು. ಉಪನ್ಯಾಸಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ