ಪ್ರಗತಿವಾಹಿನಿ ಸುದ್ದಿ, ಕುಂದಗೋಳ
ಕುಂದಗೋಳ ತಾಲ್ಲೂಕು ಇಂಗಳಗಿ ಗ್ರಾಮದಲ್ಲಿ ಗುರುವಾರ ಚುನಾವಣೆ ಪ್ರಚಾರದ ವೇಳೆ ರಾಜ್ಯ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ ಅವರು ಗಳಗಳನೆ ಅತ್ತುಬಿಟ್ಟರು.
ಭಾಷಣ ಮಾಡುವಾಗ ಮಾಜಿ ಸಚಿವ ಎಸ್.ಸಿ.ಶಿವಳ್ಳಿ ಅವರನ್ನು ನೆನಪಿಸಿಕೊಂಡ ಡಿಕೆಶಿ, ಹೆಗಲಿಗೆ ಹಾಕಿದ್ದ ಟವೆಲ್ ನಲ್ಲಿ ಕಣ್ಣು ಒರೆಸಿಕೊಳ್ಳುತ್ತಲೇ ಬಿಕ್ಕಿ ಬಿಕ್ಕಿ ಅತ್ತರು. ಶಿವಳ್ಳಿ ಹೆಂಡತಿ ಕೇಳದಿದ್ದರೂ ಅವರಿಗೆ ಟಿಕೆಟ್ ನೀಡಿದ್ದಾಗಿ ಹೇಳಿದ ಅವರು, ಶಿವಳ್ಳಿ ಗುಣಗಾನ ಮಾಡಿದರು.
ಶಿವಳ್ಳಿ ನಿಧನಕ್ಕೆ ಸಮ್ಮಿಶ್ರ ಸರಕಾರವೇ ಕಾರಣ ಎಂದು ಮಾಜಿ ಸಚಿವ ಶ್ರೀರಾಮುಲು ಇತ್ತೀಚೆಗೆ ಆರೋಪಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ