ಸಿದ್ನಾಳ್ ಹೆಸರು ಬಹುತೇಕ ಅಂತಿಮ
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು
ಬರಲಿರುವ ಲೋಕಸಭಾ ಚುನಾವಣೆಗೆ ಬೆಳಗಾವಿಯಿಂದ ಲಿಂಗಾಯತ ಸಮಾಜದವರನ್ನು ಮಾತ್ರ ಪರಿಗಣಿಸಬೇಕೆಂದು ನಿರ್ಧರಿಸಲಾಗಿದ್ದು, ಶಿವಕಾಂತ ಸಿದ್ನಾಳ್ ಅಭ್ಯರ್ಥಿಯಾಗುವುದು ಬಹುತೇಕ ಖಚಿತವಾಗಿದೆ.
ಗುರುವಾರ ಬೆಂಗಳೂರಿನಲ್ಲಿ ನಡೆದ ಸಭೆಯ ಆರಂಭದಲ್ಲೇ ಈ ಕುರಿತು ನಿರ್ಧಾರ ತೆಗೆದುಕೊಳ್ಳಲಾಯಿತು.
ಬೆಳಗಾವಿ: ಕಾಂಗ್ರೆಸ್ ನಿಂದ ಶಿವಕಾಂತ ಸಿದ್ನಾಳಗೆ ಟಿಕೆಟ್ ಸಾಧ್ಯತೆ
ಬೆಳಗಾವಿ: ಕಾಂಗ್ರೆಸ್ ನಿಂದ ಶಿವಕಾಂತ್ ಅಥವಾ ಪಟ್ಟಣ
ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅಂಜಲಿ ನಿಂಬಾಳ್ಕರ್ ಪರ ಬ್ಯಾಟಿಂಗ್ ಮಾಡಿದರು. ಆಗ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ರಾಜಶ್ರೀ ಹಲಗೇಕರ್ ಹೆಸರು ಸೂಚಿಸಿದರು. ಆದರೆ ರಾಜಶ್ರೀ ನಿಲ್ಲಲು ಒಪ್ಪಲಿಲ್ಲ.
ಇದು ಮತ್ತೆ ಹೆಬ್ಬಾಳಕರ್- ಜಾರಕಿಹೊಳಿ ಗುಂಪಿನ ಜಗಳಕ್ಕೆ ಕಾರಣವಾಗಲಿದೆ ಎಂದು ಅರಿತ ವರಿಷ್ಠರು, ಲಿಂಗಾಯತ ಸಮಾಜದ ಆಕಾಂಕ್ಷಿಗಳ ಹೆಸರನ್ನು ಮಾತ್ರ ಪರಿಗಣಿಸುವುದಾಗಿ ತಿಳಿಸಿದರು.
ಆಗ ಶಿವಕಾಂತ ಸಿದ್ನಾಳ್, ಅಶೋಕ ಪಟ್ಟಣ ಮತ್ತು ವಿ.ಎಸ್.ಸಾಧುನವರ್ ಹೆಸರು ಪ್ರಸ್ತಾಪವಾಯಿತು. ಪಟ್ಟಣ ಸ್ಪರ್ಧೆಗೆ ಅಷ್ಟೊಂದು ಆಸಕ್ತಿ ತೋರಿಸಲಿಲ್ಲ. ಸಾಧುನವರ್ ಅಲ್ಲಿ ಹಾಜರಿರಲಿಲ್ಲ.
ಅಂತಿಮವಾಗಿ ಮೂವರ ಹೆಸರನ್ನು ಹೈಕಮಾಂಡ್ ಗೆ ಕಳಿಸಲಾಯಿತಾದರೂ ಶಿವಕಾಂತ ಸಿದ್ನಾಳ್ ಅಭ್ಯರ್ಥಿಯಾಗುವುದು ಬಹುತೇಕ ಖಚಿತವಾಗಿದೆ.