ಪ್ರಗತಿವಾಹಿನಿ ಸುದ್ದಿ, ಅಗಸಗಿ
ಸೋಮವಾರ ಸಂಜೆ ಬೆಳಗಾವಿ ತಾಲೂಕಿನ ಸುತಗಟ್ಟಿ ಗ್ರಾಮದ ಹತ್ತಿರ ಕಾಕತಿ ಪೋಲಿಸ್ ಠಾಣೆ ಸಿ ಪಿ ಐ ಶ್ರೀಶೈಲ ಕೌಜಲಗಿ, ಪಿ ಎಸ್ ಐ ಅರ್ಜುನ ಹಂಚಿನಮನಿ ಮತ್ತು ಸಿಬ್ಬಂದಿ ನಡೆಸಿದ ದಾಳಿಯಲ್ಲಿ ಮರಳು ಸಾಗಿಸುತ್ತಿದ್ದ 2 ಲಾರಿಗಳನ್ನು ವಶಕ್ಕೆ ಪಡೆಯಲಾಗಿದೆ. ಲಾರಿ ಮಾಲಿಕರು ಮತ್ತು ಚಾಲಕರು ಸ್ಥಳದಿಂದ ಪರಾರಿಯಾಗಿದ್ದಾರೆ.
ಪರಿಶೀಲನೆ ನಡೆಸಿದಾಗ ಒಂದು ಲಾರಿ ಅಹ್ಮದ ಮೆಹಬೂಬ ದೆಸಾಯಿ, ಪಾರಿಶ್ವಾಡ, ಮತ್ತೊಂದು ಶಾನೂರ್ ಮೆಹಬೂಬ ಸನದಿ ಹೀರೆ ಹಟ್ಟಿಹೋಳಿ ಇವರಿಗೆ ಸೇರಿವೆ ಎಂದು ತಿಳಿದು ಬಂದಿದೆ ಎಂದು ಕಾಕತಿ ಪಿ ಐ ಅರ್ಜುನ ಹಂಚಿನಮನಿ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ