Latest

ಕೆಲ ಹೊತ್ತಿನಲ್ಲೇ ಯಡಿಯೂರಪ್ಪ ಮಾತನಾಡಿದ ಆಡಿಯೋ ರಿಲೀಸ್….

ಪ್ರಧಾನಿ ವಿರುದ್ಧ ಸಿಎಂ ವಾಗ್ದಾಳಿ -ಲೋಕಸಭೆಯಲ್ಲಿ ಪ್ರಶ್ನಿಸುವಂತೆ ವಿಪಕ್ಷಗಳಿಗೆ ಮನವಿ

 

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭೆಯಲ್ಲಿ ತಾನೊಬ್ಬ ಪ್ರಜಾಪ್ರಭುತ್ವ ರಕ್ಷಕ, ರಾಷ್ಟ್ರದ ರಕ್ಷಕ ಎನ್ನುವ ಪ್ರಧಾನಿ ತಮ್ಮದೇ ಪಕ್ಷದ ನಾಯಕರು ಕರ್ನಾಟಕದಲ್ಲಿ ಪ್ರಜಾತಂತ್ರ ವ್ಯವಸ್ಥೆಯನ್ನು ಕಗ್ಗೊಲೆ ಮಾಡುತ್ತಿರುವುದನ್ನು ಗಮನಿಸಬೇಕು ಎಂದು ಆಗ್ರಹಿಸಿದರು.

Home add -Advt

ಕೇಂದ್ರದ ವಿಪಕ್ಷಗಳು ಲೋಕಸಭೆಯಲ್ಲಿ ಪ್ರಧಾನಿಯವರ ದ್ವಂದ್ವ ನಿಲುವನ್ನು ಪ್ರಶ್ನಿಸುವಂತೆ ಕುಮಾರಸ್ವಾಮಿ ಒತ್ತಾಯಿಸಿದರು.

ಕಳೆದ 2 ದಿನದಿಂದ  ಅವಿಶ್ವಾಸ ಗೊತ್ತುವಳಿಯನ್ನೂ ಮಂಡಿಸದೆ ಕಲಾಪಕ್ಕೆ ಅಡ್ಡಿಪಡಿಸುತ್ತಿದ್ದಾರೆ. ನಮಗೆ ಬಹುಮತವಿಲ್ಲದಿದ್ದರೆ ಇವರಿಗೆ ಇದೆಯೇ? ಈಗ ಬಜೆಟ್ ಮಂಡಿಸದಿದ್ದರೆ ರಾಜ್ಯದ ಪರಿಸ್ಥಿತಿ ಏನಾಗಲಿದೆ? ನೌಕರರಿಗೆ ಸಂಬಳ ಕೊಡಲು ಸಾಧ್ಯವಿದೆಯೇ? ಆಡಳಿತ ನಡೆಸಲು ಸಾಧ್ಯವಿದೆಯೇ? ಇದೆಲ್ಲ ಅವರಿಗೆ ಗೊತ್ತಿಲ್ಲವೆ? ಈ ವ್ಯವಸ್ಥೆಯನ್ನೇ ಅವರು ಬುಡಮೇಲು ಮಾಡಲು ಹೊರಟಿದ್ದಾರೆ ಎಂದು ಕುಮಾರಸ್ವಾಮಿ ಹರಿಹಾಯ್ದರು.

ಸ್ವಲ್ಪ ಹೊತ್ತಿನಲ್ಲೇ, ಆಪರೇಶನ್ ಕಮಲದ ಯಡಿಯೂರಪ್ಪ ಧ್ವನಿಯ ಆಡಿಯೋ ರಿಲೀಸ್ ಮಾಡುವುದಾಗಿ ಪ್ರಕಟಿಸಿದರು.

(ಸಿಎಂ ಪತ್ರಿಕಾಗೋಷ್ಠಿ ಇನ್ನೂ ಮುಂದುವರಿಯುತ್ತಿದೆ)

 

Related Articles

Back to top button