ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಬೆಳಗಾವಿ ಗ್ರಾಮೀಣ ಕ್ಷೇತ್ರದ ಗಣೇಶಪುರದ ಲಕ್ಷ್ಮೀ ನಗರದಲ್ಲಿ ಜೈ ಜವಾನ್ ಮಾಜಿ ಸೈನಿಕ ಸಂಘವನ್ನು ಶಾಸಕಿ, ಮೈಸೂರು ಮಿನರಲ್ಸ್ ಚೇರಮನ್ ಲಕ್ಷ್ಮಿ ಹೆಬ್ಬಾಳಕರ್ ಉದ್ಘಾಟಿಸಿದರು.
ಈ ಸಂಘಟನೆಯು ದೊಡ್ಡದಾಗಿ ಬೆಳೆಯಲಿ ಎಂದು ಹಾರೈಸಿದ ಅವರು, ದೇಶಕ್ಕಾಗಿ ಸೈನಿಕರ ತ್ಯಾಗ ಬಲಿದಾನ ಅಮರವಾಗಿದ್ದು, ಭಯೋತ್ಪಾದಕರಿಂದ ದೇಶದ ಒಳಿತಿಗಾಗಿ ಗಡಿಯಲ್ಲಿ ಹಗಲಿರುಳು ಶ್ರಮಿಸುತ್ತಿರುವ ವೀರಯೋಧರನ್ನು ಸ್ಮರಿಸಿದರು.
ಇತ್ತೀಚಿಗೆ ಕಾಶ್ಮೀರದ ಪುಲ್ವಾಮಾದಲ್ಲಿ ವೀರಮರಣವನ್ನಪ್ಪಿದ ಸೈನಿಕರಿಗ ಶೃದ್ಧಾಂಜಲಿ ಸಲ್ಲಿಸಲಾಯಿತು.