ಪ್ರಗತಿವಾಹಿನಿ ಸುದ್ದಿ, ಅಹಮದಾಬಾದ್
ಗುಜರಾತಿನ ಮಾಜಿ ಶಾಸಕ, ಬಿಜೆಪಿಯ ಜಯಂತಿಲಾಲ್ ಭಾನುಶಾಲಿ ಅವರನ್ನು ಸೋಮವಾರ ರಾತ್ರಿ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಾರೆ.
ಜಯಂತಿಲಾಲ್ ಅವರು ಭುಜ್ ನಿಂದ ಅಹ್ಮದಾಬಾದಿಗೆ ರೈಲಿನ ಮೂಲಕ ತೆರಳುತ್ತಿದ್ದರು. ಸಾಯ್ಜಿ ನಗ್ರಿ ಎಕ್ಸ್ ಪ್ರೆಸ್ ಮತ್ತು ಕಟಾರಿಯಾ-ಸುರ್ಬಾರಿ ಸ್ಟೇಶನ್ ಮಧ್ಯೆ ಈ ಘಟನೆ ನಡೆದಿದೆ. ಆರೋಪಿಗಳ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಜಯಂತಿಲಾಲ್ ಅವರ ಮೇಲೆ ಕಳೆದ ವರ್ಷ ಮಹಿಳೆಯೊಬ್ಬರು ಅತ್ಯಾಚಾರದ ಆರೋಪ ಮಾಡಿದ್ದು ಇಲ್ಲಿ ಉಲ್ಲೇಖನೀಯ. ಆದರೆ ಘಟನೆಗೆ ಇದೇ ಕಾರಣವೋ ಅಥವಾ ಬೇರೇನೋ ಎನ್ನುವುದು ಇನ್ನಷ್ಟೆ ಗೊತ್ತಾಗಬೇಕಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ