Latest

ಗುರುದೇವ ರಾನಡೆ ತತ್ವಜ್ಞಾನ ಸಾಗರದಲ್ಲಿ ಸ್ವಚ್ಛಂದವಾಗಿ ಈಜಿದವರು -ಸಿದ್ಧೇಶ್ವರ ಶ್ರೀ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಗುರುದೇವ ರಾನಡೆ ಒಬ್ಬ ಸಂತಶ್ರೇಷ್ಠರು. ಅವರ ಜೀವನ ಸಾಧನೆ, ಚಿಂತನೆ, ದೃಷ್ಟಿಕೊನಗಳನ್ನು ಓದಿದಾಗ ಈ ಜೀವನದ ಸುಖಃ -ದುಃಖಗಳ ಮಧ್ಯೆ ವ್ಯಕ್ತಿ ಹೇಗೆ ಅನುಭಾವಿಯಾಗುತ್ತಾನೆ ಎನ್ನುವ ಅರಿವಾಗುತ್ತದೆ. ಅವರು ತತ್ವಜ್ಞಾನ ಸಾಗರದಲ್ಲಿ ಸ್ವಚ್ಛಂದವಾಗಿ ಈಜಿದವರು ಎಂದು ವಿಜಯಪುರ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಸ್ವಾಮಿಗಳು ಹೇಳಿದ್ದಾರೆ.

ಬೆಳಗಾವಿಯ ಗುರುದೇವ ರಾನಡೆ ಮಂದಿರದಲ್ಲಿ ರಾನಡೆವರ ಜೀವನದರ್ಶನದ ಕನ್ನಡ ಅನುವಾದ ಪುಸ್ತಕ ಬಿಡುಗಡೆಗೊಳಿಸಿ ಅವರು ಆಶಿರ್ವಚನ ನೀಡುತ್ತಿದ್ದರು.

ರಾನಡೆಯವರ ಸಮನ್ವಯ ಸಿದ್ಧಾಂತ ಬಹಳ ದೊಡ್ಡ ದರ್ಶನ. ದೊಡ್ಡವರು -ಸಣ್ಣವರು, ಹೆಚ್ಚು-ಕಡಿಮೆ ಎನನುವುದು ಅವರವರ ದೃಷ್ಟಿಕೋನ. ಇರುವುದು ಸತ್ಯ-ಅಸತ್ಯ ಎರಡೇ ಎಂದ ಅವರು, ಇಂತಹ ಮಂದಿರಕ್ಕೆ ಬಂದರೆ ಮನಸ್ಸು ಶಾಂತವಾಗುತ್ತದೆ. ಇಲ್ಲಿ ಬಂದು ಎಲ್ಲರೂ ನಿತ್ಯ ಧ್ಯಾನದಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

ತೋಂಟದ ಜಗದ್ಗುರು ಡಾ.ಸಿದ್ದರಾಮ ಸ್ವಾಮಿಗಳು ಮಾತನಾಡಿ, ರಾನಡೆಯವರು ಬದುಕಿನುದ್ದಕ್ಕೂ ಆತ್ಮಮಾರ್ಗವನ್ನು ಬೋಧಿಸಿದವರು.  ರಾನಡೆಯವರ ಜೀವನ ದರ್ಶನದ  ವಿಷಯಗಳು ಸಾರ್ವಕಾಲಿಕವಾದುದು ಎಂದರು.

ರಾಜ್ಯಸಭೆ ಸದಸ್ಯ ಡಾ.ಪ್ರಭಾಕರ ಕೋರೆ, ಶಾಸಕರಾದ ಅಭಯ ಪಾಟೀಲ, ಅನಿಲ ಬೆನಕೆ, ಪುಸ್ತಕದ ಅನುವಾದಕ ಚಂದ್ರಕಾಂತ ಪೋಕಳೆ ಮೊದಲಾದವರಿದ್ದರು. ಎಂ.ಬಿ.ಜಿರಲಿ ಸ್ವಾಗತಿಸಿದರು. ಕಿಶೋರ ಕಾಕಡೆ ಪ್ರಾರ್ಥನೆ ಹಾಡಿದರು. ನಿರ್ಮಲಾ ಬಟ್ಟಲ ಕಾರ್ಯಕ್ರಮ ನಿರೂಪಿಸಿದರು. ಅಶೋಕ ಪೋತದಾರ ವಂದಿಸಿದರು.

ಗುರುದೇವ ರಾನಡೆ ಜೀವನ ದರ್ಶನ 26ಕ್ಕೆ ಸಿದ್ದೇಶ್ವರ ಶ್ರೀಗಳಿಂದ ಬಿಡುಗಡೆ

(ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಪರಿಚಿತರಿಗೆ, ಎಲ್ಲ ಗ್ರುಪ್ ಗಳಿಗೆ ಶೇರ್ ಮಾಡಿ)

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button