Latest

ಚೆನ್ನೈನಲ್ಲೂ 150ಕ್ಕೂ ಹೆಚ್ಚು ಕಾರುಗಳು ಬೆಂಕಿಗಾಹುತಿ

ಪ್ರಗತಿವಾಹಿನಿ ಸುದ್ದಿ, ಚೆನ್ನೈ:
ಭಾನುವಾರ ಮಧ್ಯಾಹ್ನ ಚೆನ್ನೈನ ಪೊರೂರ್ ಪ್ರದೇಶದಲ್ಲಿ ಬೆಂಕಿ ಬಿದ್ದು, 150ಕ್ಕೂ ಹೆಚ್ಚು ಕಾರುಗಳಿಗೆ ಹಾನಿಯಾಗಿದೆ.

ಶ್ರೀರಾಮಚಂದ್ರ ಮೆಡಿಕಲ್ ಸೆಂಟರ್ ಬಳಿ ಕಾರುಗಳನ್ನು ನಿಲ್ಲಿಸಲಾಗಿತ್ತು.  ಮಧ್ಯಾಹ್ನ ಎರಡು ಗಂಟೆಗೆ ನಮಗೆ ಮಾಹಿತಿ ಸಿಕ್ಕಿತು. ಬೆಂಕಿ ನಂದಿಸುವ ಸಲುವಾಗಿ ಆರು ವಾಹನಗಳನ್ನು ಕಳುಹಿಸಲಾಯಿತು. ಆ ನಂತರ ಬೆಂಕಿಯನ್ನು ನಂದಿಸಲಾಗಿದೆ ಎಂದು ಜಿಲ್ಲಾ ಅಧಿಕಾರಿ ಪಿ.ಶರವಣನ್ ಅವರು ಮಾಹಿತಿ ನೀಡಿದ್ದಾರೆ.

ಮೂವತ್ತೆರಡು ವಾಹನಗಳನ್ನು ಅನಾಹುತದಿಂದ ತಪ್ಪಿಸಲಾಗಿದೆ. ಬೆಂಕಿಗೆ ಕಾರಣ ಏನು ಎಂಬುದು ತಿಳಿದುಬಂದಿಲ್ಲ.

 

Home add -Advt

Related Articles

Back to top button