ಡಿ.ರೂಪಾಗೆ ವಿನಯ ಕುಮಾರ ವರದಿಯ ಪ್ರತಿ ನೀಡಲು ಮಾಹಿತಿ ಹಕ್ಕು ಆಯೋಗ ಆದೇಶ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನ ಅಕ್ರಮ ಹಾಗೂ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಿವೃತ್ತ ಐಎಎಸ್ ಅಧಿಕಾರಿ ವಿನಯ ಕುಮಾರ ಸಲ್ಲಿಸಿದ್ದ ವರದಿಯ ಪ್ರತಿಯನ್ನು ಐಪಿಎಸ್ ಅಧಿಕಾರಿ ಡಿ.ರೂಪಾ ಅವರಿಗೆ ನೀಡುವಂತೆ ಮಾಹಿತಿ ಹಕ್ಕು ಆಯೋಗ ಆದೇಶಿಸಿದೆ.

ಅಂದಿನ ಬಂಧಿಖಾನೆ ಡಿಐಜಿ ಡಿ.ರೂಪಾ ಜೈಲಿನ ಮೇಲೆ ದಾಳಿ ಮಾಡಿ ಅಲ್ಲಿನ ಅಕ್ರಮಗಳನ್ನು ಬಯಲು ಮಾಡಿದ್ದರು. ಈ ಪ್ರಕರಣ ರಾಜ್ಯದಲ್ಲಿ ಭಾರೀ ಸಂಚಲನವನ್ನೇ ಸೃಷ್ಟಿಸಿತ್ತು. ನಂತರ ರೂಪಾ ಅನಗತ್ಯವಾಗಿ ವರ್ಗಾವಣೆ ಶಿಕ್ಷೆ ಅನುಭವಿಸುವಂತಾಯಿತು.

ಈ ಕುರಿತು ಸರಕಾರ ನಿವೃತ್ತ ಐಎಎಸ್ ಅಧಿಕಾರಿ ವಿನಯಕುಮಾರ ಅವರಿಂದ ತನಿಖೆ ನಡೆಸಿತ್ತು. ವಿನಯಕುಮಾರ ಸರಕಾರಕ್ಕೆ ವರದಿ ಸಲ್ಲಿಸಿದ್ದು, ವರದಿಯ ಪ್ರತಿ ನೀಡುವಂತೆ ರೂಪಾ ಮಾಡಿದ್ದ ಮನವಿಗೆ ಸರಕಾರ ಸ್ಪಂದಿಸಿರಲಿಲ್ಲ.

ರೂಪಾ ಮನಸ್ಸು ಮಾಡಿದ್ದರೆ ತಮ್ಮ ಅಧಿಕಾರವನ್ನೇ ಬಳಸಿ ವರದಿಯ ಪ್ರತಿ ಪಡೆಯಬಹುದಿತ್ತು. ಆದರೆ ಹಾಗೆ ಮಾಡದೆ, ಸಾಮಾನ್ಯ ನಾಗರಿಕರಿಗಿರುವ ಅಧಿಕಾರವನ್ನೇ ಬಳಸಿ ಮಾಹಿತಿ ಹಕ್ಕು ಕಾಯ್ದೆಯಡಿ ವರದಿಯ ಪ್ರತಿ ಪಡೆಯಲು ಅರ್ಜಿ ಸಲ್ಲಿಸಿದ್ದರು. ಇದೀಗ ಮಾಹಿತಿ ಹಕ್ಕು ಆಯೋಗ ರೂಪಾ ಅವರಿಗೆ ವರದಿಯ ಪ್ರತಿ ನೀಡಲು ಆದೇಶಿಸಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button