ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಸ್ನಾತಕೋತ್ತರ ದಂತವೈದ್ಯ ವಿದ್ಯಾರ್ಥಿಗಳಿಗೆ ನಿರಂತರ ತರಬೇತಿ ಹಾಗೂ ಶಿಕ್ಷಣ ನೀಡುವುದು ಅತ್ಯವಶ್ಯ. ದಂತ ವೈದ್ಯಕೀಯ ಕ್ಷೇತ್ರದಲ್ಲಿ ಹೆಸರು ಮಾಡಿದ ಅತಿಥಿ ಉಪನ್ಯಾಸಕರಿಂದ ಜ್ಞಾನ ಸಂಪಾದಿಸಿಕೊಳ್ಳಬೇಕು. ದಂತ ವೈದ್ಯ ವಿಜ್ಞಾನವೂ ಕೂಡ ಇಂದು ಬಹುಬೇಡಿಕೆಯುಳ್ಳ ಹಾಗೂ ಕೌಶಲದ ಕ್ಷೇತ್ರವಾಗಿದೆ ಎಂದು ಓಎಂಎಫ್ಎಸ್ ಕರ್ನಾಟಕ ಘಟಕದ ಅಧ್ಯಕ್ಷ ಡಾ. ಶ್ರೀಪತಿ ರಾವ್ ಹೇಳಿದರು.
ನಗರದ ಕೆಎಲ್ಇ ಸಂಸ್ಥೆಯ ವಿಕೆ ದಂತ ವಿಜ್ಞಾನ ಮಹಾವಿದ್ಯಾಲಯದ ಓಎಂಎಫ್ಎಸ್ ವಿಭಾಗದ ವತಿಯಿಂದ ಏರ್ಪಡಿಸಲಾದ ದಂತ ವೈದ್ಯಕೀಯ ಸ್ನಾತಕೋತ್ತರ ವಿದ್ಯಾರ್ಥಿಗಳಿಗಾಗಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಸಂಸ್ಥೆಯ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಹಾಗೂ ವಿಶ್ವವಿದ್ಯಾಲಯವು ಒದಗಿಸುತ್ತಿರುವ ಅವಕಾಶಗಳನ್ನು ಬಳಸಿಕೊಂಡು ಸಾಧನೆಯ ಪಥದಲ್ಲಿ ಸಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಬೇಕು. ತಜ್ಞವೈದ್ಯರ ಸಹಕಾರದಿಂದ ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದ ಕಾರ್ಯಾಗಾರಗಳನ್ನು ಏರ್ಪಡಿಸಿ ವಿದ್ಯಾರ್ಥಿಗಳ eನವೃದ್ಧಿಗೆ ಅವಕಾಶ ಕಲ್ಪಿಸಲಾಗುತ್ತಿದೆ. ವೈದ್ಯ ಕೇತ್ರದಲ್ಲಿ ಲಭಿಸುವ ಸಕಲ ಅವಕಾಶಗಳ ಸದುಪಯೋಗ ಪಡೆದು ಸಾಮಾನ್ಯ ಜನತೆಗೆ ಸಹಾಯ ಹಸ್ತ ಚಾಚಿ ಎಂದರು.
ಹಿರಿಯ ತಜ್ಞವೈದ್ಯ ಡಾ. ಎಚ್.ಬಿ. ರಾಜಶೇಖರ, ಕೆಎಲ್ಇ ವಿಶ್ವವಿದ್ಯಾಲಯದ ಕುಲಸಚಿವ ಡಾ. ವಿ.ಡಿ. ಪಾಟೀಲ, ದಂತ ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ. ಅಲ್ಕಾ ಕಾಳೆ, ಡಾ. ತೇಜರಾಜ ಕಾಳೆ, ಡಾ. ಎಸ್.ಎಂ. ಕೊಟ್ರಶೆಟ್ಟಿ, ಡಾ. ಶ್ರೀಧರ ಬಾಳಿಗಾ, ಡಾ. ಆರತಿ ನೀಲಿ, ಡಾ. ಸಿದ್ದರಾಮೇಶ, ಡಾ. ವಿಜಯಲಕ್ಷ್ಮಿ, ಡಾ. ಅಭಿಷೇಕ ಎಂ., ಡಾ. ಸ್ನೇಹಲತಾ ಎನ್, ಡಾ. ಪೂರ್ವಿ ಜಿ. ಮುಂತಾದವರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ