ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ನಗರದ ದೇವೇಂದ್ರ ಜಿನಗೌಡ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ೧೦ನೇ ತರಗತಿ ಇಂಗ್ಲೀಷ ಮಾಧ್ಯಮ ಮತ್ತು ೭ ನೇ ತರಗತಿ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಬೀಳ್ಕೊಡುವ ಸಮಾರಂಭ ಏರ್ಪಡಿಸಲಾಗಿತ್ತು.
ಮುಖ್ಯ ಅತಿಥಿ ನ್ಯಾಯವಾದಿ ಮಾರುತಿ ಜಿರಲಿ ಮಕ್ಕಳು ಭವಿಷ್ಯದಲ್ಲಿ ಉತ್ತಮ ನಾಗರಿಕರಾಗಿ ಬದುಕಲಿ ಎಂದು ಹಾರೈಸಿದರು.
ಗೋಪಾಲ ದೇವೇಂದ್ರ ಜಿನಗೌಡ ಮಾತನಾಡಿದರು. ಶಾಲೆಯ ವಾರ್ಷಿಕ ಚಟುವಟಿಕೆಗಳನ್ನು ಒಳಗೊಂಡ ಜಿನಗೌಡ ಶಾಲೆಯ ಉತ್ಕರ್ಷ ವಾರ್ತೆ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.
ಕಾರ್ಯದರ್ಶಿ ಶರದ ಬಾಳಿಕಾಯಿ, ಸದಸ್ಯರಾದ ಸಂದೀಪ ಚಿಪ್ರೆ, ಇಂದಿರಾ ಶಂಕರಗೌಡ, ಪ್ರಮೋದ ಜಿನಗೌಡ, ಮುಖ್ಯ ಶಿಕ್ಷಕರು, ಸಹಶಿಕ್ಷಕರು, ಕಾಲೇಜಿನ ಪ್ರಾಚಾರ್ಯ ಕಾಶಿನಾಥ ಶೃಂಗೇರಿ, ಉಪಪ್ರಾಚಾರ್ಯ ಸುರೇಶ ಲಂಡನಕರ ಉಪಸ್ಥಿತರಿದ್ದರು. ಮುಖ್ಯಾಧ್ಯಾಪಕಿ ವಿಜಯಲಕ್ಷ್ಮಿ ಪಾಟೀಲ ಸ್ವಾಗತಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ