Kannada NewsLatest

ನಾಗನೂರು ರುದ್ರಾಕ್ಷಿಮಠದ ನೂತನ ಶ್ರೀಗಳಿಗೆ ಹುಕ್ಕೇರಿ ಶ್ರೀಗಳಿಂದ ಸನ್ಮಾನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ :

ಬೆಳಗಾವಿ ನಾಗನೂರು ರುದ್ರಾಕ್ಷಿ ಮಠದ ಉತ್ತರಾಧಿಕಾರಿಗಳಾಗಿ ಆಯ್ಕೆ ಆದ ಶ್ರೀ ಸಾವಳಗೀಶ್ವರ ದೇವರನ್ನು ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಗೌರವಿಸಿ ಸನ್ಮಾನಿಸಿದರು.

ನಾಗನೂರು ರುದ್ರಾಕ್ಷಿಮಠ ಡಾ. ಶಿವಬಸವ ಮಹಾಸ್ವಾಮಿಗಳ ಕಾಲದಿಂದ ಪ್ರಭು ಮಹಾಸ್ವಾಮಿಗಳು ಹಾಗೂ ಸದ್ಯದ ಅಧಿಪತಿಗಳು ಗದುಗಿನ ಜಗದ್ಗುರುಗಳು ಆಗಿರುವಂತ ಡಾ. ಸಿದ್ಧರಾಮ ಮಹಾಸ್ವಾಮಿಗಳ ಸತತ ಪರಿಶ್ರಮದ ಫಲವಾಗಿ ಇವತ್ತು ಕರ್ನಾಟಕ ಅಷ್ಟೇ ಅಲ್ಲ ದೇಶ ಹೊರದೇಶಗಳಲ್ಲಿ ಕೂಡ ನಾಗನೂರು ರುದ್ರಾಕ್ಷಿಮಠ ಖ್ಯಾತಿಯಾಗಿದೆ.

ಇಂಥ ಪ್ರತಿಷ್ಠಿತ ಮಠಕ್ಕೆ ಸಾವಳಗೀಶ್ವರ ದೇವರು ಉತ್ತರಾಧಿಕಾರಿಗಳಾಗಿ ಆಯ್ಕೆಯಾಗಿರುವುದು ಅಭಿಮಾನದ ಸಂಗತಿ. ಗುರುಗಳು ಹಾಕಿಕೊಟ್ಟ ಮಾರ್ಗದಲ್ಲಿ ಶ್ರೀಮಠವನ್ನು ನಡೆಸುವುದರ ಮುಖಾಂತರ ಗಡಿನಾಡಿನ ಕನ್ನಡದ ಕೋಟೆಯಂತಿರುವ ನಾಗನೂರು ರುದ್ರಾಕ್ಷಿ ಮಠದ ಕೀರ್ತಿಯನ್ನು ಇನ್ನೂ ಹೆಚ್ಚಿಸುವಲ್ಲಿ ಶ್ರೀಗಳು ಪರಿಶ್ರಮಿಸಲಿ ಎಂದು ಆಶಯವನ್ನು ವ್ಯಕ್ತಪಡಿಸಿದರು.

Home add -Advt

Related Articles

Back to top button