ಪ್ರಗತಿವಾಹಿನಿ ಸುದ್ದಿ, ಬೆಂಗಳೂರು
ಮಾರ್ಚ್ ತಿಂಗಳಲ್ಲಿ ನಡೆದ ಪಿಯುಸಿ ಫಲಿತಾಂಶ ಪ್ರಕಟವಾಗಿದೆ. ಶೇ.61.73ರಷ್ಟು ವಿದ್ಯಾರ್ಥಿಗಳು ಉತ್ತೀರ್ಣವಾಗಿದ್ದು, ಕಳೆದ ಬಾರಿಗಿಂತ ಶೇ. 2.17ರಷ್ಟು ಉತ್ತಮವಾದಂತಾಗಿದೆ.
ಉಡುಪಿ (92.20%) ಮೊದಲ ಸ್ಥಾನ, ದಕ್ಷಿಣ ಕನ್ನಡ (92 ದ್ವಿತೀಯ ಹಾಗೂ ಕೊಡಗು ಮೂರನೆ ಸ್ಥಾನ ಪಡೆದಿದೆ. ಚಿತ್ರದುರ್ಗಕ್ಕೆ (51.4%) ಕೊನೆಯ ಸ್ಥಾನ ಬಂದಿದೆ. ವಿದ್ಯಾರ್ಥಿಯನಿಯರು ಹೆಚ್ಚಿನ ಸಂಖ್ಯೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಕಳೆದ ಬಾರಿ ಕೊನೆಯ ಸ್ಥಾನದಲ್ಲಿದ್ದ ಚಿಕ್ಕೋಡಿ 25ನೇ ಸ್ಥಾನಕ್ಕೇರಿದೆ. ಒಟ್ಟೂ 2,447 ವಿದ್ಯಾರ್ಥಿಗಳು ಗಣಿತ ವಿಷಯದಲ್ಲಿ ಶೇ.100ರಷ್ಟು ಅಂಕ ಗಳಿಸಿದ್ದಾರೆ. 94 ಅನುದಾನ ರಹಿತ ಮತ್ತು 3 ಸರಕಾರಿ ಕಾಲೇಜುಗಳಲ್ಲಿ ಶೂನ್ಯ ಫಲಿಂತಾಶ ಬಂದಿದೆ.
ವಾಣಿಜ್ಯ ವಿಭಾಗದಲ್ಲಿ ಶೇ.66.88, ಕಲಾ ವಿಭಾಗದಲ್ಲಿ ಶೇ.50, ವಿಜ್ಞಾನ ವಿಭಾಗದಲ್ಲಿ ಶೇ.66.88 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಫಲಿತಾಶ ನೋಡುವುದಕ್ಕೆ ಇಲಾಖೆ ನೀಡಿರುವ ಅಧಿಕೃತ ವೆಬ್ಸೈಟ್ –
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ