


ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಬುಧವಾರ ಸಂಜೆ ಕಿಡಿಗೇಡಿಗಳು ಸಿಬಿಟಿ ಬಸ್ ಚಾಲಕನನ್ನು ಹಿಗ್ಗಾಮುಗ್ಗಾ ಥಳಿಸಿದ್ದು ಎಪಿಎಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಿಬಿಟಿ – ಸಹ್ಯಾದ್ರಿ ನಗರ ಮಾರ್ಗದ ನಗರ ಬಸ್ಸಿನ ಚಾಲಕನನ್ನು ಹನುಮಾನ ನಗರ ಸರ್ಕಲ್ ನಲ್ಲಿ ಕಿಡಿಕೇಡಿಗಳು ಥಳಿಸಿದ್ದಾರೆ. ಈ ಸಂಬಂಧ ಮೂವರು ಕಿಡಿಗೇಡಿಗಳನ್ನು ಬಂಧಿಸಲಾಗಿದೆ.
ಜಯನಗರದ ಮಹಾದೇವ ಕಲ್ಲಪ್ಪ ಚೌಗುಲೆ(೨೫) ಓಂಕಾರ ನಗರದ ಕರಣ ಹೀರಾಮನಿ ಭಾತಖಾಂಡೆ(೨೫) ಹಾಗೂ ಬಸವ ಕಾಲೊನಿಯ ವಿಷ್ಣು ಮಾರುತಿ ಪಾಟೀಲ(೨೫) ಬಂಧಿತರು.
ಆ್ಯಕ್ಟಿವ್ ಮೊಪೆಡ್ ಮೇಲೆ ಮೂವರು ಕಿಡಿಗೇಡಿಗಳು ರಾಂಗ್ ಸೈಡ್ ನಲ್ಲಿ ಚಲಿಸುತ್ತಿದ್ದರು.
ಸಚಿನ ಖಾಂಡೆ ಎಂಬ ಸರಕಾರಿ ಚಾಲಕನೇ ಹಲ್ಲೆಗೊಳಗಾಗಿದ್ದು, ಕೈ ಮುರಿದಿದೆ. ಬಸ್ಸಿನ ನಿರ್ವಾಹಕ ಶಂಕರ ಲಮಾಣಿ ದೂರು ನೀಡಿದ್ದಾರೆ. ಎಫ್ ಐ ಆರ್ ದಾಖಲಾಗಿದೆ.