Latest

ಬಹುಕೋಟಿ ವೆಚ್ಚದ `ಗಾಯತ್ರಿ ಭವನ’ಕ್ಕೆ ನೆರವು ನೀಡಿ -ಎಸ್.ಎಂ.ಕುಲಕರ್ಣಿ ಮನವಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಬಹುಕೋಟಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ `ಗಾಯತ್ರಿ ಭವನ’ವನ್ನು ಶೀಘ್ರವೇ ಪೂರ್ಣಗೊಳಿಸಿ ಸಮಾಜದ ಸೇವೆಗೆ ಅರ್ಪಿಸಲು ಇಂದಿಲ್ಲಿ ನಡೆದ ಬ್ರಾಹ್ಮಣ ಸಮಾಜ ನಿರ್ಧರಿಸಿದೆ.
ಹಿರಿಯ ನ್ಯಾಯವಾದಿ ಮತ್ತು ಬ್ರಾಹ್ಣಣ ಸಮಾಜದ ಅಧ್ಯಕ್ಷ ಎಸ್.ಎಂ. ಕುಲಕರ್ಣಿ ಅಧ್ಯಕ್ಷತೆಯಲ್ಲಿ ಚಿದಂಬರೇಶ್ವರ ದೇವಸ್ಥಾನದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಮಾಡಲಾಯಿತು.
ಅನಗೋಳದ ನಾಲ್ಕನೇ ರೇಲ್ವೆ ಗೇಟ್ ಬಳಿ ನಿರ್ಮಿಸಲಾಗುತ್ತಿರುವ ಗಾಯತ್ರಿ ಭವನಕ್ಕೆ ಇದೇ ದಿನಾಂಕ 7 ರಂದು ಬೆಳಿಗ್ಗೆ ಸ್ಲ್ಯಾಬ್ ಪೂಜಾ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಸಮಾಜದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿರಬೇಕೆಂದು ಎಸ್.ಎಂ. ಕುಲಕರ್ಣಿ ಮನವಿ ಮಾಡಿಕೊಂಡರು. 
ಇಲ್ಲಿಯವರೆಗೆ ಸುಮಾರು 26 ಲಕ್ಷ ರೂ. ವೆಚ್ಚ ಮಾಡಲಾಗಿದೆ. ಇನ್ನು ಮುಂದಿನ ಕಾಮಗಾರಿಯನ್ನು ಪೂರ್ಣಗೊಳಿಸಲು ಸಾಕಷ್ಟು ಆರ್ಥಿಕ ನೆರವಿನ ಅವಶ್ಯಕತೆಯಿದೆ. ರಾಜ್ಯ ಸರಕಾರಕ್ಕೂ ಕೂಡ ಮನವಿ ಮಾಡಿಕೊಳ್ಳಲಾಗಿದೆ. ಆದರೆ ಸರ್ಕಾರದ ನೆರವು ಬರುವವರೆಗೆ ಕಾಯುತ್ತ ಕುಳಿತುಕೊಂಡರೆ ಇನ್ನೂ ನಾಲ್ಕು ವರ್ಷವಾದರೂ ಈ ಭವನ ಪೂರ್ಣಗೊಳ್ಳುವುದಿಲ್ಲ.  ಆದ್ದರಿಂದ ಸಮಾಜದ ಬಲದಿಂದಲೇ ಹಣ ಸಂಗ್ರಹಿಸಿ ಇದನ್ನು ಪೂರ್ಣಗೊಳಿಸಬೇಕು ಎನ್ನುವುದು ನಮ್ಮ ಆಶಯವಾಗಿದೆ ಎಂದು ಎಸ್.ಎಂ. ಕುಲಕರ್ಣಿ ಹೇಳಿದರು.
ಬಹುಕೋಟಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ಗಾಯತ್ರಿ ಭವನವನ್ನು ಸಮಾಜದ ಒಳತಿಗಾಗಿ ಉಪಯೋಗ ಮಾಡಲಾಗುತ್ತಿದೆ. ನಮ್ಮ ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಇದನ್ನು ನಿರ್ಮಿಸಲಾಗುತ್ತಿದೆ ಎಂದರು.
ಈ ಭವನದ ಸಭಾಂಗಣಕ್ಕೆ ಹಿರಿಯ ಸ್ವಾತಂತ್ರ್ಯಯೋಧ ದಿ. ಆರ್.ಎಚ್. ಕುಲಕರ್ಣಿ ಅವರ ಹೆಸರು ಇಡಲೂ ಸಹ ಈ ಸಭೆಯಲ್ಲಿ ಸರ್ವಾನುಮತದ ನಿರ್ಧಾರ ಕೈಗೊಳ್ಳಲಾಯಿತು.
ಬ್ರಾಹ್ಮಣ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಆರ್.ಎಸ್. ಮುತಾಲಿಕ ಅವರು ಗಾಯತ್ರಿ ಭವನ ನಿರ್ಮಾಣದ ಹಿಂದಿನ ಉದ್ದೇಶವನ್ನು ವಿವರಿಸಿದರು. ಪ್ರಿಯಾ ಪುರಾಣಿಕ, ಗೋವಿಂದ ಫಡಕೆ,  ವಿನಯ ಕುಲಕರ್ಣಿ, ಸುಭಾಷ ಕುಲಕರ್ಣಿ, ಶಿರೀಷ್ ಕಾಣಿಲಕರ, ರಾಕೇಶ ದೇಶಪಾಂಡೆ, ಅರವಿಂದ ಹುನಗುಂದ, ವಾಣಿ ಜೋಶಿ, ಸುನೀತಾ ಪಾಟೀಲ, ಪೂರ್ಣಿಮಾ ಕುಲಕರ್ಣಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸಭೆಯ ನಂತರ ಗಾಯತ್ರಿ ಭವನದ ಕಟ್ಟಡ ಕಾಮಗಾರಿಯನ್ನು ಸಹ ವೀಕ್ಷಣೆ ಮಾಡಲಾಯಿತು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button