ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಬೆಳಗಾವಿ ಗ್ರಾಮೀಣ ಕ್ಷೇತ್ರದ 18 ರಸ್ತೆಗಳ ಅಭಿವೃದ್ಧಿಗೆ 8 ಕೋಟಿ ರೂ. ವಿಶೇಷ ಅನುದಾನ ಬಿಡುಗಡೆಗೊಳಿಸಲಾಗಿದೆ. ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಮನವಿ ಮೇರೆಗೆ ಮುಖ್ಯಮಂತ್ರಿಗಳೇ ಈ ವಿಶೇಷ ಅನುದಾನ ಬಿಡುಗಡೆಗೆ ಆದೇಶಿಸಿದ್ದಾರೆ.
ಕರಡಿಗುದ್ದಿ ಗ್ರಾಮದಿಂದ ಮರಿಕಟ್ಟಿ ಗ್ರಾಮದವರೆಗೆ ರಸ್ತೆ ಸುಧಾರಣೆಗೆ 130 ಲಕ್ಷ ರೂ., ಬಸರಿಕಟ್ಟಿ ಗ್ರಾಮದಿಂದ ಸಾಂಬ್ರಾವರೆಗೆ 190 ಲಕ್ಷ ರೂ., ಹಿಂಡಲಗಾ ಗ್ರಾಮದಿಂದ ಗಣೇಶಪುರ ಗ್ರಾಮದವರೆಗೆ 50 ಲಕ್ಷ ರೂ., ಹೊನ್ನಿಹಾಳ ಗ್ರಾಮದಿಂದ ವಿಮಾನ ಗ್ರಾಮದವರೆಗೆ 50 ಲಕ್ಷ ರೂ., ನಾಯಕವಾಡಿ ಗ್ರಾಮದಿಂದ ಕುದರೆಮನಿ ಗ್ರಾಮದವರೆಗೆ 40 ಲಕ್ಷ ರೂ., ತುರಮುರಿ ಗ್ರಾಮದ ರಸ್ತೆಗೆ 40 ಲಕ್ಷ ರೂ., ಬಾಚಿಗೆ 20 ಲಕ್ಷ ರೂ., ಹಂಗರಗಾ 20 ಲಕ್ಷ ರೂ., ಬೆಳಗುಂದಿಗೆ 50 ಲಕ್ಷ ರೂ., ಮಾರಿಹಾಳಕ್ಕೆ 25 ಲಕ್ಷ ರೂ. ಹೊನ್ನಿಹಾಳಕ್ಕೆ 25 ಲಕ್ಷ ರೂ., ಕರಡಿಗುದ್ದಿಗೆ 20 ಲಕ್ಷ ರೂ., ರಣಕುಂಡೆಗೆ 40 ಲಕ್ಷ ರೂ., ಹಿಂಡಲಗಾ, ಬಿ.ಕೆ.ಕಂಗ್ರಾಳಿ, ಕಂಗ್ರಾಳಿ ಕೆ.ಎಚ್., ಪಂತಬಾಳೆಕುಂದ್ರಿ ಹಾಗೂ ಶಿಂಧೊಳ್ಳಿಗೆ ತಲಾ 20 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ