ಬೆಳಗಾವಿ ಈಗ ಬಯಲು ಶೌಚ ಮುಕ್ತ ಜಿಲ್ಲೆ -ಕೃಷ್ಣ ಭೈರೇಗೌಡ ಮಾಹಿತಿ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಸರಕಾರದ ದಾಖಲೆಗಳಲ್ಲಿ ಬೆಳಗಾವಿ ಕಳೆದ ನವೆಂಬರ್ ತಿಂಗಳಿನಲ್ಲೇ ಬಯಲು ಶೌಚ ಮುಕ್ತ ಜಿಲ್ಲೆ!
ಜಿಲ್ಲೆಯಲ್ಲಿ 406.37 ಕೋಚಿ ರೂ. ವೆಚ್ಚದಲ್ಲಿ 4.28 ಲಕ್ಷ ಶೌಚಾಲಗಳನ್ನು ನಿರ್ಮಾಣ ಮಾಡುವ ಮೂಲಕ ಸಂಪೂರ್ಣ ಜಿಲ್ಲೆಯನ್ನು ಬಯಲು ಶೌಚ ಮುಕ್ತ ಮಾಡಲಾಗಿದೆ ಎಂದು ಪಂಚಾಯತರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣ ಭೈರೇಗೌಡ ವಿಧಾನ ಪರಿಷತ್ತಿನಲ್ಲಿ ತಿಳಿಸಿದ್ದಾರೆ.
ಬಿಜೆಪಿಯ ಮಹಾಂತೇಶ ಕವಟಗಿಮಠ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಅವರು, ರಾಜ್ಯದ 30 ಜಿಲ್ಲೆಗಳನ್ನು ಬಯಲು ಶೌಚಮುಕ್ತ ಜಿಲ್ಲೆ ಎಂದು ಈಗಾಗಲೆ ಘೋಷಿಸಲಾಗಿದೆ ಎಂದು ತಿಳಿಸಿದ್ದಾರೆ.
ಕಳೆದ 5 ವರ್ಷದಲ್ಲಿ ಬೆಳಗಾವಿ ಜಿಲ್ಲೆಯ ಅಥಣಿ 52,165, ಬೈಲಹೊಂಗಲ 36,023, ಚಿಕ್ಕೋಡಿ 53,487, ಗೋಕಾಕ 52,337 ಬೆಳಗಾವಿ 25,508, ಹುಕ್ಕೇರಿ 44,966, ಖಾನಾಪುರ 29,505, ರಾಮದುರ್ಗ 34,734, ರಾಯಬಾಗ 34,482, ಸವದತ್ತಿ 36,962 ಶೌಚಾಲಯಗಳನ್ನು ನಿರ್ಮಾಣ ಮಾಡಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಜಿಲ್ಲೆಯಲ್ಲಿ 5.41 ಕುಟುಂಬಗಳಿದ್ದು, 1.12 ಕುಟುಂಬಗಳು ಮೊದಲೇ ಶೌಚಾಲಯ ಹೊಂದಿದ್ದವು. ಈಗ ಸಂಪೂರ್ಣ ಜಿಲ್ಲೆ ಶೌಚಾಲಯ ಹೊಂದಿದಂತಾಗಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ