*
ಪ್ರಗತಿವಾಹಿನಿ ಸುದ್ದಿ, ಚನ್ನಮ್ಮ ಕಿತ್ತೂರು
ಸರಕಾರ ಚನ್ನಮ್ಮಾಜಿಯ ಹೆಸರಿನಲ್ಲಿ ಭಜನೆ ಮಾಡಿದರೆ ಕಿತ್ತೂರ ಕೋಟೆ ಅಭಿವೃದ್ದಿಯಾಗಲು ಸಾದ್ಯವಿಲ್ಲ. ಸರಕಾರ ಕೋಟೆ ಅಭಿವೃದ್ದಿ ಮಾಡುವಲ್ಲಿ ವಿಫಲವಾಗಿದೆ ಎಂದು ವಿಧಾನ ಪರಿಷತ್ ಸದಸ್ಯೆ ಡಾ. ತೇಜಸ್ವಿನಿಗೌಡಾ ಹೇಳಿದರು.
ಭಾನುವಾರ ಪಟ್ಟಣದ ಐತಿಹಾಸಿಕ ಚನ್ನಮ್ಮಾಜಿಯ ಕೋಟೆಯನ್ನು ವೀಕ್ಷಣೆ ಮಾಡಿ ಮಾತನಾಡಿ, ಮುಂಬರುವ ಪೀಳಿಗೆಗೆ ಚನ್ನಮ್ಮಾಜಿಯ ಇತಿಹಾಸದ ಬಗ್ಗೆ ತಿಳಿದುಕೊಳ್ಳಲು ಕೊಟೆಯನ್ನು ಹಾಗೂ ಇಲ್ಲಿರುವ ಸ್ಮಾರಕಗಳನ್ನು ಪುನರ್ ನಿರ್ಮಾಣಮಾಡಬೇಕು. ಕೋಟೆಗೆ ಬರುವ ಪ್ರವಾಸಿಗರಿಗೆ ಒಳಗೆ ಬಂದ ತಕ್ಷಣ ಚನ್ನಮ್ಮಾಜಿಯ ಇತಿಹಾಸವನ್ನು ತಿಳಿಸಲು ಮಾಹಿತಿದಾರರು ಇರಬೇಕಾಗುತ್ತದೆ. ಆದರೆ ಇಲ್ಲಿ ವಸ್ತು ಪಾಲಕರೆ ಈ ಕೆಲಸ ನಿರ್ವಹಿಸಬೇಕಾಗಿದೆ ಎಂದು ಖೇದ ವ್ಯಕ್ತಪಡಿಸಿದರು.
ಉತ್ಸವಕ್ಕೆ ಖರ್ಚು ಮಾಡುವ ಹಣದಲ್ಲಿ ಸ್ವಲ್ಪ ಭಾಗ ಕೋಟೆಗೆ ಖರ್ಚು ಮಾಡಿದ್ದರೆ ಇವತ್ತು ಕೋಟೆ ಸಂಪೂರ್ಣ ಅಭಿವೃದ್ದಿಹೊಂದಬಹುದಿತ್ತು. ಈ ಐತಿಹಾಸಿಕ ಕೋಟೆಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಪ್ರವಾಸೋದ್ಯಮ ಇಲಾಖೆಗೆ ವರ್ಗಾಯಿಸಿದ್ದಾರೆ. ಇದು ಅವ್ಶೆಜ್ಞಾನಿಕತೆಯಿಂದ ಕೂಡಿದೆ ಎಂದು ಹೇಳಿದರು.
ಅಭಿವೃದ್ದಿಯಲ್ಲಿ ರಾಜಕೀಯ, ಮತ್ತು ಜಾತಿಯನ್ನು ಹಚ್ಚದೇ ಪ್ರಾಮಾಣಿಕತೆಯಿಂದ ಕೆಲಸ ಮಾಡಿದರೆ ಅಭಿವೃದ್ದಿ ಹೊಂದಲು ಸಾದ್ಯ. ಐತಿಹಾಸಿಕ ಕೋಟೆಯಲ್ಲಿರುವ ಚನ್ನಮ್ಮಾಜಿಯ ದರ್ಬಾರ ಹಾಲಿನಲ್ಲಿ ಚನ್ನಮ್ಮಾಜಿಯ ಪತ್ತಳಿಯನ್ನು ನಿರ್ಮಾಣ ಮಾಡಬೇಕು. ಪ್ರವಾಸಿಗರಿಗೆ ತಿಳಿಯುವಂತೆ ಮಹಾದ್ವಾರದ ಬಳಿ ಚನ್ನಮ್ಮಾಜಿಯ ಇತಿಹಾಸದ ನಾಮಫಲಕವನ್ನು ಅಳವಡಿಸಬೇಕು ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ